ಬೆಂಗಳೂರು:ರೋಗಿಗಳಿಗೆ ಬಿಡಿ ಮಾತ್ರೆಗಳನ್ನು ನೀಡಲು ನಿರಾಕರಿಸಿದ ಆರೋಪದಡಿ ಫೋರ್ಟಿಸ್ ಆಸ್ಪತ್ರೆಯ ಮೆಡಿಕಲ್ ಸ್ಟೋರ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಸ್ಪತ್ರೆಯ ಆವರಣದಲ್ಲಿರುವ ಮೆಡಿಕಲ್ ಸ್ಟೋರ್ ಸಿಬ್ಬಂದಿಯ ವಿರುದ್ಧ ಬೆಂಗಳೂರು ವಿವಿಐಪಿ ಭದ್ರತಾ ವಿಭಾಗದ ಆರ್.ಎಸ್.ಐ ಭೈರಯ್ಯ ಎಂಬವರು ದೂರು ನೀಡಿದ್ದಾರೆ.
ಅನಾರೋಗ್ಯದ ಕಾರಣದಿಂದ ಸೆಪ್ಟೆಂಬರ್ 9ರಂದು ವಿವಿಐಪಿ ಭದ್ರತಾ ವಿಭಾಗದ ಉಪ ಪೊಲೀಸ್ ಆಯುಕ್ತರು ಪೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ವೈದ್ಯರು ಸೂಚಿಸಿದ ಮಾತ್ರೆಗಳನ್ನು ಕೊಳ್ಳಲು ಪೋರ್ಟಿಸ್ ಆಸ್ಪತ್ರೆಯ ಮೆಡಿಕಲ್ ಸ್ಟೋರ್ಗೆ ಹೋದಾಗ ಸ್ಟೋರ್ ಸಿಬ್ಬಂದಿ ಬಿಡಿ ಮಾತ್ರೆಗಳನ್ನು ಕೊಡಲು ನಿರಾಕರಿಸಿದ್ದಾರೆ. ಪೂರ್ತಿ ಮಾತೆಯ ಶೀಟ್‌ಗಳನ್ನು ಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.