ಕರ್ನಾಟಕ

karnataka

By ETV Bharat Karnataka Team

Published : Jun 27, 2024, 4:05 PM IST

Updated : Jun 27, 2024, 4:17 PM IST

ETV Bharat / state

ಸಿಎಂ ಸ್ಥಾನ ಬಿಟ್ಟುಕೊಡಬೇಕೆಂಬ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ? - CM Siddaramaiah

ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್‌ಗೆ ಬಿಟ್ಟುಕೊಡಬೇಕೆಂಬ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

CM Siddaramaiah and Chandrashekhar Swamiji
ಸಿಎಂ ಸಿದ್ದರಾಮಯ್ಯ ಹಾಗೂ ಚಂದ್ರಶೇಖರ್ ಸ್ವಾಮೀಜಿ (ETV Bharat)

ಮತ್ತೆ ಮುನ್ನೆಲೆಗೆ ಬಂದ ಅಧಿಕಾರ ಹಸ್ತಾಂತರ ವಿಚಾರ (ETV Bharat)

ಬೆಂಗಳೂರು: "ಕಾಂಗ್ರೆಸ್ ಪಕ್ಷ ಹೈಕಮಾಂಡ್ ಪಕ್ಷ. ಎಲ್ಲಾ ವಿಚಾರಗಳನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದರಂತೆ ನಡೆದುಕೊಳ್ಳಲಾಗುತ್ತದೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಡಿ.ಕೆ.ಶಿವಕುಮಾರ್ ಅವರಿ​ಗೆ ಸಿಎಂ ಸ್ಥಾನ ಬಿಟ್ಟುಕೊಡಲಿ ಎಂಬ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ್​​ ಸ್ವಾಮೀಜಿ ಹೇಳಿಕೆಗೆ ಸಿದ್ದರಾಮಯ್ಯ ಈ ರೀತಿ ಪ್ರತಿಕ್ರಿಯಿಸಿದರು.

"ಕಷ್ಟ ಪಟ್ಟವರು, ಪಕ್ಷ ಸಂಘಟನೆ‌ ಮಾಡಿದವರು ಸಿಎಂ ಆದರೆ ಒಳ್ಳೆಯದು. ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಣಯ ಅಂತ ನೆಪಕ್ಕೆ ಮಾತ್ರ ಹೇಳಲಾಗುತ್ತಿದೆ" ಎಂದು ಇಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಡಪ್ರಭು ಕೇಂಪೇಗೌಡರ 515ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಸಿದ್ದರಾಮಯ್ಯ ಅಧಿಕಾರದಲ್ಲಿ ಇರುವುದರಿಂದ ಅವರು ಮನಸ್ಸು ಮಾಡಿದ್ರೆ ಅಧಿಕಾರ ಹಸ್ತಾಂತರ ಸುಲಭವಾಗುತ್ತದೆ. ಹೋರಾಟ ಮಾಡುವುದಕ್ಕಿಂತ ಅವರೇ ಮನಸ್ಸು ಮಾಡಬೇಕು" ಎಂದು ಇದೇ ವೇಳೆ ಸ್ವಾಮೀಜಿ ಮನವಿ ಮಾಡಿದರು.

"ಸಿದ್ದರಾಮಯ್ಯ ತಕ್ಷಣವೇ ಸಿಎಂ ಸ್ಥಾನ ಬಿಟ್ಟು ಕೊಡಲಿ. ಸಾಮಾನ್ಯ ಮನುಷ್ಯನನ್ನು ಕೇಳಿದ್ರೂ ಡಿಕೆಶಿನೇ ಸಿಎಂ ಆಗಲಿ ಅಂತಿದ್ದಾನೆ. ಅವರು ಸಂಘಟನೆ ಮಾಡಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದಾರೆ. ಇದು ವಿವಾದ ಹುಟ್ಟು ಹಾಕುವುದಿಲ್ಲ. ಉದಾರ ಮನೋಭಾವನೆ ಇದ್ದರೆ ವಿವಾದ ಏಕೆ ಬರುತ್ತದೆ?. ಸಿದ್ದರಾಮಯ್ಯ ಸಿಎಂ ಹುದ್ದೆಯನ್ನು ಈಗಾಗಲೇ ಅನುಭವಿಸಿದ್ದಾರೆ. ಹಾಗಾಗಿ, ಈಗ ಬಿಟ್ಟುಕೊಡಲಿ. ಈ ಕುರಿತಾಗಿ ನಾವು ಹೈಕಮಾಂಡ್ ನಾಯಕರಿಗೆ ಪತ್ರ ಬರೆಯುವುದಿಲ್ಲ. ಇರುವ ವಿಚಾರವನ್ನು ಹೇಳಿದ್ದೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಸಮ್ಮುಖದಲ್ಲೇ ಚಂದ್ರಶೇಖರ್ ಸ್ವಾಮೀಜಿ ಬೇಡಿಕೆ - Chandrashekhar Swamiji

Last Updated : Jun 27, 2024, 4:17 PM IST

ABOUT THE AUTHOR

...view details