ಬೆಂಗಳೂರು: ಅರಮನೆ ಮೈದಾನದಲ್ಲಿ ಆಯೋಜಿಸಿರುವ ಜಾಗತಿಕ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್ ಕರ್ನಾಟಕ 2025' ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಇಂದು ವ್ಹೀಲ್ ಚೇರ್‌ನಲ್ಲಿ ಆಗಮಿಸಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಸಮಾವೇಶ ಉದ್ಘಾಟನೆಗೊಂಡ ಬಳಿಕವೂ ರಾಜನಾಥ್ ಸಿಂಗ್ ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಅವರ ಮೊಣಕಾಲಿನ ನೋವಿನ ಬಗ್ಗೆ ಪ್ರಸ್ತಾಪಿಸಿ ಶೀಘ್ರ ಗುಣಮುಖರಾಗಿ ಎಂದಿನಂತೆ ತಮ್ಮ ಕೆಲಸದಲ್ಲಿ ಸಕ್ರಿಯರಾಗುವಂತೆ ಹಾರೈಸಿದರು. ನಂತರ ಸಿಂಗ್ ತಮ್ಮ ಭಾಷಣ ಮುಂದುವರೆಸಿದರು.
ಇನ್ವೆಸ್ಟ್ ಕರ್ನಾಟಕ ಸಮಾವೇಶ (ETV Bharat) ಇದಕ್ಕೂ ಮುನ್ನ ನಾಡಗೀತೆ ಮೂಲಕ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದ ಉದ್ಘಾಟನೆಗೊಂಡಿತು. ಅಯನಾ ತಂಡ ಮನಮೋಹಕ ನೃತ್ಯ ಪ್ರದರ್ಶಿಸಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಡಿಸಿಎಂ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸಚಿವರಾದ ಕೆ.ಎಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್, ಡಾ.ಜಿ.ಪರಮೇಶ್ವರ್, ಶರಣು ಪ್ರಕಾಶ್ ಪಾಟೀಲ್, ಹೆಚ್.ಸಿ.ಮಹದೇವಪ್ಪ ಸೇರಿದಂತೆ ರಾಜ್ಯ ಸರ್ಕಾರದ ಇತರ ಸಚಿವರುಗಳು, ಉದ್ಯಮಿಗಳಾದ ಆನಂದ್ ಮಹೀಂದ್ರ, ಸಜ್ಜನ್ ಜಿಂದಾಲ್, ಗೀತಾಂಜಲಿ ಕಿರ್ಲೋಸ್ಕರ್, ಕಿರಣ್ ಮಜುಂದಾರ್ ಶಾ, ಲ್ಯಾಮ್ ರಿಸರ್ಚ್ನ ಡಾ.ಪ್ಯಾಟ್ರಿಕ್ ಲಾರ್ಡ್, ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ವೆಸ್ಟ್ ಕರ್ನಾಟಕ ಸಮಾವೇಶ (ETV Bharat) ಇದನ್ನೂ ಓದಿ:ರಾಜ್ಯದ 'ಪ್ರಗತಿಯ ಮರುಕಲ್ಪನೆ' ಇನ್ವೆಸ್ಟ್ ಕರ್ನಾಟಕ 2025ಕ್ಕೆ ಇಂದು ಚಾಲನೆ: ರಕ್ಷಣಾ ಸಚಿವರಿಂದ ಉದ್ಘಾಟನೆ
ಇದನ್ನೂ ಓದಿ:ಮೆಟ್ರೋ ಟಿಕೆಟ್ ದರ ಕೇಂದ್ರ ನೇಮಿಸುವ ಸಮಿತಿಯಿಂದ ನಿಗದಿ, ರಾಜ್ಯ ಸರ್ಕಾರವಲ್ಲ: ಸಿಎಂ ಸಿದ್ದರಾಮಯ್ಯ