ಕರ್ನಾಟಕ

karnataka

ETV Bharat / state

ರೌಡಿಶೀಟರ್ ಗ್ಯಾಂಗ್​ಗಳ ನಡುವೆ ಹೊಡೆದಾಟ: ಆರೋಪಿ ಬಂಧನ‌ ವೇಳೆ ಪೊಲೀಸ್ ಫೈರಿಂಗ್ - Police Firing

ಬಂಧನದ ವೇಳೆ ಪೊಲೀಸ್​ ಸಿಬ್ಬಂದಿಗೆ ಹಲ್ಲೆ ನಡೆಸಿ ತಪ್ಪಿಸಲು ಯತ್ನಿಸಿದ ಗ್ಯಾಂಗ್​ವಾರ್​ ಆರೋಪಿ ಕಾಲಿಗೆ ಇನ್​ಸ್ಪೆಕ್ಟರ್ ರಾಘವೇಂದ್ರ ಗುಂಡು ಹಾರಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Police Commissioner N Shashikumar
ಪೊಲೀಸ್​ ಆಯುಕ್ತ ಎನ್​.ಶಶಿಕುಮಾರ್​ (ETV Bharat)

By ETV Bharat Karnataka Team

Published : Aug 19, 2024, 4:23 PM IST

Updated : Aug 19, 2024, 6:09 PM IST

ಪೊಲೀಸ್​ ಆಯುಕ್ತ ಎನ್​.ಶಶಿಕುಮಾರ್​ (ETV Bharat)

ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ‌ ಮತ್ತೆ ಪೊಲೀಸರ ಗನ್ ಸದ್ದು ಮಾಡಿದೆ. ಭಾನುವಾರ ತಡರಾತ್ರಿ ಕಸಬಾ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಗ್ಯಾಂಗ್‌ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಬಂಧನ‌ಕ್ಕೆ ಪೊಲೀಸ್​ ಸಿಬ್ಬಂದಿ ತೆರಳಿದ್ದರು. ಈ ವೇಳೆ ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದ ರೌಡಿಶೀಟರ್ ಆರೋಪಿಗೆ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ರೌಡಿಶೀಟರ್ ಅಪ್ತಾಬ್ ಕರಡಿಗುಡ್ಡ ಗುಂಡೇಟು ತಿಂದ ಆರೋಪಿ.‌

ಭಾನುವಾರ ನಡೆದ ಗ್ಯಾಂಗ್​ವಾರ್‌ನಲ್ಲಿ ಗಾಯಗೊಂಡಿದ್ದ ಜಾವೂರ್ ಎಂಬಾತ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ದೂರು ಪಡೆದುಕೊಂಡು, ಆರೋಪಿ ಅಪ್ತಾಬ್​ ಕರಡುಗುಡ್ಡ ಬಂಧನಕ್ಕೆ ಇನ್​ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು ತಂಡ ತೆರಳಿತ್ತು. ಈ ವೇಳೆ ಅಪ್ತಾಬ್ ಪೊಲೀಸ್​ ಸಿಬ್ಬಂದಿ ರಾಜು ರಾಠೋಡ್ ಮತ್ತು ಪಾಲಯ್ಯ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಕೂಡಲೇ ಅಲರ್ಟ್ ಆದ ಇನ್​ಸ್ಪೆಕ್ಟರ್ ರಾಘವೇಂದ್ರ ಅವರು ಅಪ್ತಾಬ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಾಳು ಆರೋಪಿ ಸೇರಿ ಪೊಲೀಸ್​ ಸಿಬ್ಬಂದಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆ ಮಾಹಿತಿ ಮೇರೆಗೆ ಕಿಮ್ಸ್​ ಆಸ್ಪತ್ರೆಗೆ ಹುಬ್ಬಳ್ಳಿ ಧಾರವಾಡ ಕಮಿಷನರ್ ಎನ್.ಶಶಿಕುಮಾರ್​ ಭೇಟಿ ನೀಡಿ ಗಾಯಾಳು ಸಿಬ್ಬಂದಿ ಆರೋಗ್ಯ ವಿಚಾರಿಸಿದರು.

ಬಳಿಕ‌ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಕಸಬಾ ಪೊಲೀಸ್​ ಠಾಣೆ ವ್ಯಾಪ್ತಿಯ ಸದರ್ ಸೋಫಾ ಬ್ಯಾಹಟಿ ಪಾರ್ಕ್​ ಬಳಿ ಭಾನುವಾರ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು.‌ ಜಾವೂರ ಬೇಪಾರಿ ಎಂಬವನಿಗೆ ಗಂಭೀರ ಗಾಯವಾಗಿತ್ತು. ಇದರಲ್ಲಿ ಜಾವೂರ ಬೇಪಾರಿ ಟೀಂ ಮತ್ತೊಂದು ಟೀಂನ ಮೇಲೆ ಹಲ್ಲೆಗೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ಕೌಂಟರ್ ದೂರು ನೀಡಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಏಳು ಜನರನ್ನು ರಾತ್ರಿಯೇ ಬಂಧಿಸಲಾಗಿದೆ. ಆರೋಪಿ ಅಪ್ತಾಬ್ ಬುಡರಸಿಂಗಿ ಬಳಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ತಪಿಸಿಕೊಳ್ಳಲು ಮುಂದಾಗಿದ್ದ ಸಂದರ್ಭದಲ್ಲಿ ನಮ್ಮ ಠಾಣೆ ಇನ್​ಸ್ಪೆಕ್ಟರ್ ಫೈರಿಂಗ್ ಮಾಡಿದ್ದಾರೆ. ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ" ಎಂದು ತಿಳಿಸಿದರು. ‌

Last Updated : Aug 19, 2024, 6:09 PM IST

ABOUT THE AUTHOR

...view details