ಬೆಂಗಳೂರು :ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ (75) ಇಂದು ನಿಧನರಾಗಿದ್ದಾರೆ. ಇದೀಗ ಜೆಪಿ ನಗರದಲ್ಲಿರುವ ಸುದೀಪ್ ಅವರ ಮನೆಯ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜಕೀಯ ಮುಖಂಡರು, ಚಿತ್ರರಂಗದವರು ಸುದೀಪ್ ತಾಯಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟಿ ರಕ್ಷಿತಾ, ನಿರ್ದೇಶಕ ಪ್ರೇಮ್ ಅವರು ಸುದೀಪ್ ತಾಯಿ ಸರೋಜಾ ಅವರ ಅಂತಿಮ ದರ್ಶನ ಪಡೆದರು.