ಚಿಕ್ಕಬಳ್ಳಾಪುರ:ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಲೆ ಮಾಡಿರುವ ಘಟನೆ ಶಿಡ್ಲಘಟ್ಟ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಸೊಣ್ಣೇನಹಳ್ಳಿ ಗ್ರಾಮದಲ್ಲಿ ಇಂದು (ಮಂಗಳವಾರ) ಬೆಳಗ್ಗೆ ಸುಮಾರು 6.45ರ ಸಂದರ್ಭದಲ್ಲಿ ಮುನಿರೆಡ್ಡಿ (60) ವರ್ಷ ತನ್ನ ಮೊದಲನೇ ಹೆಂಡತಿ ಪದ್ಮಮ್ಮ (50) ಅವರನ್ನು ಮುಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಂಡ, ಹೆಂಡತಿ ನಡುವೆ ಮನಸ್ತಾಪಗಳಿದ್ದು, ಮೃತ ಪದ್ಮಮ್ಮ ಅವರು ಜಮೀನು ವಿವಾದ ಸಂಬಂಧ ಕೋರ್ಟ್ನಲ್ಲಿ ವ್ಯಾಜ್ಯ ಹೂಡಿರುವುದು ಹಾಗೂ ಜೊತೆಗೆ ತನ್ನ ಪತ್ನಿ ಅದೇ ಗ್ರಾಮದ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಮುನಿರೆಡ್ಡಿ ಮತ್ತು ಅವರ ಮಗ ಇಬ್ಬರೂ ಸೇರಿ ಪದ್ಮಮ್ಮಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಗಳು ತಿಳಿಸಿವೆ.