ಚಿಕ್ಕಮಗಳೂರಲ್ಲಿ ವರುಣನ ಆರ್ಭಟ (ETV Bharat) ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಸಾರ್ವಜನಿಕರು ಹಾಗೂ ರೈತರು ಪ್ರತಿನಿತ್ಯದ ಕೆಲಸ ಮಾಡಿಕೊಳ್ಳುವುದಕ್ಕೂ ಪರದಾಟ ನಡೆಸುವಂತಾಗಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ರಾಜ್ಯದಲ್ಲೇ ಅtI ಹೆಚ್ಚು ಮಳೆ ದಾಖಲಾಗಿದೆ. ಕಳೆದ ಒಂದೇ ದಿನದಲ್ಲಿ 98.0 ಮಿಲಿ ಮೀಟರ್ ದಾಖಲೆಯ ಮಳೆ ಸುರಿದಿದ್ದು, 4 ಇಂಚು ಮಳೆಗೆ ಕೊಟ್ಟಿಗೆಹಾರ, ಚಾರ್ಮಾಡಿ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಕೊಟ್ಟಿಗೆಹಾರ ಗ್ರಾಮ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳಲ್ಲೂ ನಿರಂತರವಾಗಿ ಮಳೆ ಸುರಿಯುತ್ತಿದೆ.
ಇದನ್ನೂ ಓದಿ:ಕರಾವಳಿ ಜಿಲ್ಲೆಗಳಿಗೆ ಎರಡು ದಿನ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ - red alert to coastal districts
ಕಳೆದ ವರ್ಷ ಜುಲೈ ತಿಂಗಳಲ್ಲಿ ಕೇವಲ ಒಂದು ಇಂಚು ಮಳೆಯಾಗಿತ್ತು. ಆದ್ರೀಗ ಸುರಿಯುತ್ತಿರುವ ನಿರಂತರ, ಧಾರಾಕಾರ ಮಳೆಯಿಂದಾಗಿ ಚಾರ್ಮಾಡಿ ಘಾಟ್ ಹೆದ್ದಾರಿ ಸಂಚಾರ ದುಸ್ಥರವಾಗಿದೆ. ಬಾಳೂರು, ಮಲೆಮನೆ, ಮಧುಗುಂಡಿ, ಜಾವಳಿ, ಕೊಗ್ರೆ ಭಾಗದಲ್ಲೂ ಮಳೆ ಆರ್ಭಟ ಮುಂದುವರಿದಿದ್ದು, ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮೂಡಿಗೆರೆ, ಕಳಸ, ಕುದುರೆಮುಖ ಭಾಗದಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದೆ. ತುಂಗಭದ್ರಾ, ಹೇಮಾವತಿ ನದಿ ನೀರಿನ ಹರಿವಿನ ಮಟ್ಟದಲ್ಲಿ ಹೆಚ್ಚಳ ಕಂಡುಬಂದಿದ್ದು, ನೀರು ಜೋರಾಗಿ ಹರಿದು ಬರಲು ಪ್ರಾರಂಭವಾಗಿದೆ.