ಕರ್ನಾಟಕ

karnataka

ETV Bharat / state

ನೈರುತ್ಯ ರೈಲ್ವೆ ಸೇವೆಯಲ್ಲಿ ಬದಲಾವಣೆ: ಯಾವಾಗ, ಯಾವ ರೈಲುಗಳ ಸಂಚಾರ.. ಇಲ್ಲಿದೆ ಮಾಹಿತಿ - South Western Railway - SOUTH WESTERN RAILWAY

ಕಾಮಗಾರಿ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯ ಕೆಲ ಮಾರ್ಗಗಳಲ್ಲಿ ಕೆಲದಿನ ಬದಲಾವಣೆ ಮಾಡಲಾಗಿದೆ.

railway
ರೈಲ್ವೆ ನಿಲ್ದಾಣ (ETV Bharat)

By ETV Bharat Karnataka Team

Published : Jul 18, 2024, 10:35 PM IST

ಹುಬ್ಬಳ್ಳಿ:ಬೆಂಗಳೂರು ಯಾರ್ಡ್ ಸೇತುವೆ ಸಂಖ್ಯೆ 867 ಮತ್ತು ಬೆಂಗಳೂರು ಕಂಟೋನ್ಮೆಂಟ್ - ಕೆಎಸ್ಆರ್ ಬೆಂಗಳೂರು ಭಾಗದ ಮಧ್ಯದ ಸೇತುವೆಯಲ್ಲಿ ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ಕೆಲ ರೈಲುಗಳ ಸಂಚಾರವನ್ನು ರದ್ದು, ಭಾಗಶಃ ರದ್ದು, ಮಾರ್ಗ ಬದಲಾವಣೆ ಮತ್ತು ನಿಯಂತ್ರಣ ಮಾಡಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಸಂಚಾರ ರದ್ದಾದ ರೈಲುಗಳು: ಜುಲೈ 30, ಆಗಸ್ಟ್ 6 ಮತ್ತು 13ರಂದು ರೈಲು ಸಂಖ್ಯೆ 12658 ಕೆಎಸ್ಆರ್ ಬೆಂಗಳೂರು - ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್ ಮತ್ತು ಜುಲೈ 31, ಆಗಸ್ಟ್ 7 ಮತ್ತು 14ರಂದು ರೈಲು ಸಂಖ್ಯೆ 12657 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ - ಕೆಎಸ್ಆರ್ ಬೆಂಗಳೂರು ಡೈಲಿ ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್ ಸಂಚಾರ ತಾತ್ಕಾಲಿಕವಾಗಿ ರದ್ದಾಗಲಿದೆ.

ಭಾಗಶಃ ರದ್ದು:ಜುಲೈ 30, ಆಗಸ್ಟ್ 6 ಮತ್ತು 13ರಂದು ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12657 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ - ಕೆಎಸ್ಆರ್ ಬೆಂಗಳೂರು ಡೈಲಿ ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್ ರೈಲು ವೈಟ್ ಫೀಲ್ಡ್ - ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ, ನಾಂದೇಡ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16594 ನಾಂದೇಡ್-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್​ಪ್ರೆಸ್​​ ರೈಲು ಯಲಹಂಕ - ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ, ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 17392 ಎಸ್ಎಸ್ಎಸ್ ಹುಬ್ಬಳ್ಳಿ - ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್​ಪ್ರೆಸ್​​ ರೈಲು, ಯಶವಂತಪುರ - ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಮತ್ತು ಹೊಸಪೇಟೆಯಿಂದ ಹೊರಡುವ ರೈಲು ಸಂಖ್ಯೆ 06244 ಹೊಸಪೇಟೆ - ಕೆಎಸ್ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಯಶವಂತಪುರ - ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿವೆ.

ಜುಲೈ 31, ಆಗಸ್ಟ್ 7 ಮತ್ತು 14ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು - ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್​​ ರೈಲು ಕೆಎಸ್ಆರ್ ಬೆಂಗಳೂರು - ಯಶವಂತಪುರ ನಿಲ್ದಾಣಗಳ ನಡುವೆ, ಹೊಸಪೇಟೆಯಿಂದ ಹೊರಡುವ ರೈಲು ಸಂಖ್ಯೆ 06243 ಕೆಎಸ್ಆರ್ ಬೆಂಗಳೂರು - ಹೊಸಪೇಟೆ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಕೆಎಸ್ಆರ್ ಬೆಂಗಳೂರು-ಯಶವಂತಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿವೆ. ಈ ರೈಲುಗಳು ಯಶವಂತಪುರ ನಿಲ್ದಾಣದಿಂದ ನಿಗದಿತ ಸಮಯದಲ್ಲಿ ಪ್ರಾರಂಭವಾಗಲಿವೆ.

ಮಾರ್ಗ ಬದಲಾವಣೆ: ಜುಲೈ 29, ಆಗಸ್ಟ್ 5 ಮತ್ತು 12ರಂದು ಪ್ರಾರಂಭವಾಗುವ ರೈಲು ಸಂಖ್ಯೆ 11013 ಲೋಕಮಾನ್ಯ ತಿಲಕ್ ಟರ್ಮಿನಸ್ - ಕೊಯಮತ್ತೂರು ಡೈಲಿ ಎಕ್ಸ್​ಪ್ರೆಸ್​​ ರೈಲು ಗೌರಿಬಿದನೂರು, ಬೈಯಪ್ಪನಹಳ್ಳಿ, ಎಸ್ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ, ಹೊಸೂರು ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ, ಬೆಂಗಳೂರು ಪೂರ್ವ, ಬೆಂಗಳೂರು ಕಂಟೋನ್ಮೆಂಟ್, ಕೆಎಸ್ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ. ಬೆಂಗಳೂರಿನ ಎಸ್ಎಂವಿಟಿಯಲ್ಲಿ ಹೆಚ್ಚುವರಿ ನಿಲುಗಡೆ ಇರಲಿದೆ.

ಜುಲೈ 30, ಆಗಸ್ಟ್ 6 ಮತ್ತು 13ರಂದು ಪ್ರಾರಂಭವಾಗುವ ರೈಲು ಸಂಖ್ಯೆ 06270 ಎಸ್ಎಂವಿಟಿ ಬೆಂಗಳೂರು - ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಎಸ್ಎಂವಿಟಿ ಬೆಂಗಳೂರು, ಬಾಣಸವಾಡಿ, ಹೆಬ್ಬಾಳ, ಯಶವಂತಪುರ, ಕೆಎಸ್ಆರ್ ಬೆಂಗಳೂರು ಮೂಲಕ ಸಂಚರಿಸಲಿದೆ. ಹೀಗಾಗಿ, ಬೆಂಗಳೂರು ಕ್ಯಾಂಟ್ ನಲ್ಲಿ ನಿಗದಿತ ನಿಲುಗಡೆ ಇರಲ್ಲ. ರೈಲು ಸಂಖ್ಯೆ 06269 ಮೈಸೂರು - ಎಸ್ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಎಸ್ಎಂವಿಟಿ ಬೆಂಗಳೂರು ಮೂಲಕ ತೆರಳಲಿದೆ. ಬೆಂಗಳೂರು ಕಂಟೋನ್ಮೆಂಟ್​​ನಲ್ಲಿ ನಿಗದಿತ ನಿಲುಗಡೆ ಇಲ್ಲ.

ರೈಲು ಸಂಖ್ಯೆ 16593ಕೆಎಸ್ಆರ್ ಬೆಂಗಳೂರು - ನಾಂದೇಡ್ ಡೈಲಿ ಎಕ್ಸ್​ಪ್ರೆಸ್​​ ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ 00:45 ಗಂಟೆಗೆ ಹೊರಟು, ಕೆಎಸ್ಆರ್ ಬೆಂಗಳೂರು, ಯಶವಂತಪುರ, ಯಲಹಂಕ ಮಾರ್ಗದ ಮೂಲಕ ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್​​ನಲ್ಲಿ ನಿಗದಿತ ನಿಲುಗಡೆಯಿಲ್ಲ.

ರೈಲು ಸಂಖ್ಯೆ 16521ಬಂಗಾರಪೇಟೆ - ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು ಕೃಷ್ಣರಾಜಪುರಂ, ಬೈಯಪ್ಪನಹಳ್ಳಿ, ಬಾಣಸವಾಡಿ, ಹೆಬ್ಬಾಳ, ಯಶವಂತಪುರ, ಕೆಎಸ್ಆರ್ ಬೆಂಗಳೂರು ಮೂಲಕ ತೆರಳಲಿದೆ. ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಕಂಟೋನ್ಮೆಂಟ್​​ನಲ್ಲಿ ನಿಗದಿತ ನಿಲುಗಡೆ ಇಲ್ಲ.

ರೈಲು ಸಂಖ್ಯೆ 16022ಮೈಸೂರು - ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಕಾವೇರಿ ಡೈಲಿ ಎಕ್ಸ್​ಪ್ರೆಸ್​​ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಬೈಯಪ್ಪನಹಳ್ಳಿ, ಕೃಷ್ಣರಾಜಪುರಂ ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ ನಲ್ಲಿ ನಿಗದಿತ ನಿಲುಗಡೆ ಇರಲ್ಲ.

ರೈಲು ಸಂಖ್ಯೆ 16021ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ಕಾವೇರಿ ಡೈಲಿ ಎಕ್ಸ್​ಪ್ರೆಸ್​​ ಕೃಷ್ಣರಾಜಪುರಂ, ಬೈಯಪ್ಪನಹಳ್ಳಿ, ಬಾಣಸವಾಡಿ, ಹೆಬ್ಬಾಳ, ಯಶವಂತಪುರ, ಕೆಎಸ್ಆರ್ ಬೆಂಗಳೂರು ಮೂಲಕ ಸಂಚರಿಸಲಿದೆ. ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಕ್ಯಾಂಟ್​​ನಲ್ಲಿ ನಿಗದಿತ ನಿಲುಗಡೆ ಇಲ್ಲ.

ರೈಲುಗಳ ನಿಯಂತ್ರಣ: ಜುಲೈ 30, ಆಗಸ್ಟ್ 6 ಮತ್ತು 13ರಂದು ಪ್ರಾರಂಭವಾಗುವ ರೈಲು ಸಂಖ್ಯೆ 11301 ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ - ಕೆಎಸ್ಆರ್ ಬೆಂಗಳೂರು ಉದ್ಯಾನ್ ಎಕ್ಸ್​ಪ್ರೆಸ್ ಅನ್ನು ಮಾರ್ಗದಲ್ಲಿ 5 ನಿಮಿಷ, ರೈಲು ಸಂಖ್ಯೆ 16231 ಮೈಲಾಡುತುರೈ - ಮೈಸೂರು ಎಕ್ಸ್​ಪ್ರೆಸ್​​ ರೈಲನ್ನು ಮಾರ್ಗದಲ್ಲಿ 45 ನಿಮಿಷ ಹಾಗೂ ರೈಲು ಸಂಖ್ಯೆ 16220 ತಿರುಪತಿ - ಚಾಮರಾಜನಗರ ಎಕ್ಸ್​ಪ್ರೆಸ್​​ ಅನ್ನು 100 ನಿಮಿಷ ಮಾರ್ಗದಲ್ಲಿ ನಿಯಂತ್ರಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಭಾರಿ ಮಳೆ ಹಿನ್ನೆಲೆ ರೆಡ್​​​​​ ಅಲರ್ಟ್​ ಘೋಷಣೆ - ಉಡುಪಿ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಶುಕ್ರವಾರ ಶಾಲೆಗೆ ರಜೆ - School Holiday

ABOUT THE AUTHOR

...view details