ಕರ್ನಾಟಕ

karnataka

ETV Bharat / state

ಬಿಜೆಪಿ ಅಭ್ಯರ್ಥಿ ಬಾಲರಾಜು ಅವರಿಗಿಂತ ಪತ್ನಿ ಸಿರಿವಂತೆ; ಕೈ​ ಅಭ್ಯರ್ಥಿ ಸುನೀಲ್ ಬೋಸ್​​ಗೆ ₹5.5 ಕೋಟಿ ಸಾಲ - Chamarajanagar Constituency

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಬಾಲರಾಜು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುನೀಲ್ ಬೋಸ್ ಇಂದು ನಾಮಪತ್ರ ಸಲ್ಲಿಸಿದರು.

Nomination Paper Submission
ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ನಾಮಪತ್ರ ಸಲ್ಲಿಸಿದರು.

By ETV Bharat Karnataka Team

Published : Apr 3, 2024, 10:13 PM IST

ಚಾಮರಾಜನಗರ:ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಬಾಲರಾಜು ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ. ವಿವಿಧ ಬ್ಯಾಂಕ್​ಗಳ ಠೇವಣಿ, ಚಿನ್ನಾಭರಣ ಸೇರಿ ಚರಾಸ್ತಿ ಒಟ್ಟು ಮೌಲ್ಯ 17,03,225 ರೂ.ಇದ್ದು, ಪತ್ನಿ ವಿಮಲಾ‌ ಅವರ ಬಳಿ 56,74,812 ರೂ., ಮೊದಲನೇ ಮಗನ ಬಳಿ 8.94 ಲಕ್ಷ, ಎರಡನೇ ಪುತ್ರನ ಬಳಿ 6.9 ಲಕ್ಷ ಮೌಲ್ಯದ ಚರಾಸ್ತಿ ಇದೆ.

ಬಾಲರಾಜು ಬಳಿ 70 ಗ್ರಾಂ ಚಿನ್ನ ಇದ್ದು, ಪತ್ನಿ ಬಳಿ‌ 700 ಗ್ರಾಂ, ಪುತ್ರರ ಬಳಿ ತಲಾ 40 ಗ್ರಾಂ ಚಿನ್ನಾಭರಣ ಇದೆ. ಬಾಲರಾಜು ಅವರ ಬಳಿ ಸ್ವಂತದ ಯಾವುದೇ ವಾಹನಗಳಿಲ್ಲ. ಪತ್ನಿ ಹೆಸರಲ್ಲಿ 2 ಕಾರು ಸೇರಿ ಮೂರು ವಾಹನ, ಮೊದಲನೇ ಮಗನ ಬಳಿ 2 ಬೈಕ್, 1 ಕಾರು, ಎರಡನೇ ಮಗನ ಬಳಿ 1 ಬೈಕ್ ಇದೆ.

ಸ್ಥಿರಾಸ್ಥಿ ವಿಚಾರಕ್ಕೆ ಬಂದರೆ 55 ಲಕ್ಷ ಮೌಲ್ಯದ ಕೃಷಿ ಭೂಮಿ ಮಾತ್ರ ಬಾಲರಾಜು ಬಳಿ ಇದ್ದು ಪತ್ನಿ ಬಳಿ ವಸತಿ ಕಟ್ಟಡ, ಕೃಷಿ ಭೂಮಿ ಸೇರಿ 2.10 ಕೋಟಿ ಮೌಲ್ಯದ ಆಸ್ತಿ ಇದೆ. ಮೊದಲನೇ ಮಗನ ಬಳಿ 75 ಲಕ್ಷ, ಎರಡನೇ ಮಗನ ಬಳಿ 45 ಲಕ್ಷದ ನಿವೇಶನ, ಕಟ್ಟಡಗಳಿವೆ. ಒಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜು ಅವರಿಗಿಂತ ಪತ್ನಿ ಹಾಗೂ ಮಕ್ಕಳೇ ಶ್ರೀಮಂತರು.

ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಆಸ್ತಿ ವಿವರ: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿರುವ ಸುನಿಲ್ ಬೋಸ್ ಅವರ ಕೈಯಲ್ಲಿ 9,09,000 ನಗದಿದ್ದು ಸಹೋದರ ಹಾಗೂ ಸ್ನೇಹಿತರಿಂದ 5,56,78,947 ರೂ. ಸಾಲ ಪಡೆದಿದ್ದಾರೆ.

ಬೋಸ್ ಅವರ ಬಳಿ ಚರಾಸ್ತಿ ಒಟ್ಟು ಮೌಲ್ಯ 3,53,08,251 ರೂ. ಆಗಿದ್ದು ಸ್ಥಿರಾಸ್ತಿ ಮೌಲ್ಯ 4,31,58,000 ರೂ.ಇದೆ. ಇವರ ಬಳಿ ಸ್ವಂತಕ್ಕೆ ಯಾವುದೇ ವಾಹನಗಳಿಲ್ಲ.

ಇದನ್ನೂಓದಿ:ಕಾಂಗ್ರೆಸ್​ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುತ್ತೇವೆ: ಶಾಸಕ ವಿಜಯಾನಂದ ಕಾಶಪ್ಪನವರ - Lok Sabha Election 2024

ABOUT THE AUTHOR

...view details