ಕರ್ನಾಟಕ

karnataka

ETV Bharat / state

ಸಾಮಾಜಿಕ ಜಾಲತಾಣಗಳಲ್ಲಿ ರೌಡಿಶೀಟರ್ಸ್ ಪರ ಫ್ಯಾನ್ಸ್ ಪೇಜ್‍ ನಿರ್ವಹಿಸುತ್ತಿದ್ದವರಿಗೆ ಸಿಸಿಬಿ ಪೊಲೀಸರ ಶಾಕ್ - POLICE CASE - POLICE CASE

ಸೋಶಿಯಲ್ ಮೀಡಿಯಾದಲ್ಲಿ ರೌಡಿಶೀಟರ್ ಪರ ಫ್ಯಾನ್ಸ್​ ಪೇಜ್ ಸೃಷ್ಟಿಸಿ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಿದ್ದವರಿಗೆ ಸಿಸಿಬಿ ಪೊಲೀಸರು ಶಾಕ್ ನೀಡಿದ್ದಾರೆ.

Dr. Chandragupta
ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ (ETV BHARAT)

By ETV Bharat Karnataka Team

Published : Jul 22, 2024, 4:46 PM IST

ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ (ETV BHARAT)

ಬೆಂಗಳೂರು :ಸಾಮಾಜಿಕ ಜಾಲತಾಣಗಳಲ್ಲಿ ರೌಡಿ ಶೀಟರ್ಸ್ ಪರ ಫ್ಯಾನ್ಸ್ ಪೇಜ್ ಸೃಷ್ಟಿಸಿ, ವಿಡಿಯೋಗಳನ್ನ ಅಪ್‌ಲೋಡ್ ಮಾಡುತ್ತಿದ್ದವರಿಗೆ ಸಿಸಿಬಿಯ ಸಂಘಟಿತ ಅಪರಾಧ ನಿಯಂತ್ರಣ ದಳದ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ರೌಡಿಶೀಟರ್ಸ್ ಪರ ವಿಡಿಯೋಗಳನ್ನ ಅಪ್‌ಲೋಡ್ ಮಾಡುತ್ತಿದ್ದ ಇನ್ಸ್ಟಾಗ್ರಾಂ, ಫೇಸ್‌ಬುಕ್‌, ಯೂಟ್ಯೂಬ್ ಸೇರಿದಂತೆ 60ಕ್ಕೂ ಅಧಿಕ ಖಾತೆಗಳನ್ನ ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ಅವುಗಳನ್ನ ನಿಯಂತ್ರಣ ಮಾಡುತ್ತಿದ್ದ ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿರುವ ಪೊಲೀಸರಿಗೆ, ಇತ್ತೀಚಿನ ದಿನಗಳಲ್ಲಿ ಜೈಲಿನಲ್ಲಿರುವ ಹಾಗೂ ಹೊರಗಿರುವ ಕೆಲ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ತಮ್ಮ ಇರುವಿಕೆಯನ್ನ ತೋರ್ಪಡಿಸುವ ಹಾಗೂ ಪ್ರಭಾವ ಬೀರುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡಿಸುತ್ತಿರುವುದು, ಫ್ಯಾನ್ಸ್ ಪೇಜ್‍ಗಳನ್ನ ಹೊಂದಿರುವುದು ಪತ್ತೆಯಾಗಿತ್ತು.

ಆ ಖಾತೆಗಳನ್ನ ನಿರ್ವಹಿಸುತ್ತಿದ್ದವರನ್ನ ಪತ್ತೆಹಚ್ಚಿರುವ ಪೊಲೀಸರು ಅವುಗಳನ್ನ ನಿಷ್ಕ್ರಿಯಗೊಳಿಸಿದ್ದಾರೆ. ಬಹುತೇಕ ಖಾತೆಗಳನ್ನ ಅಪ್ರಾಪ್ತರು ನಿರ್ವಹಿಸುತ್ತಿದ್ದುದು ಕಂಡುಬಂದಿದ್ದು, ಅವರ ಪೋಷಕರನ್ನ ಕರೆಸಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

'ಸುಲಭವಾಗಿ ಲಭ್ಯವಿರುವ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ರೌಡಿಶೀಟರ್ಸ್ ಫ್ಯಾನ್ಸ್ ಪೇಜ್‍ಗಳನ್ನ ಹೊಂದಿರುವುದರ ಕುರಿತು ನಿಗಾ ವಹಿಸಲಾಗಿದೆ. ಅಪ್ರಾಪ್ತರು ಸೇರಿದಂತೆ ಕೆಲವರಿಗೆ ತಮ್ಮ ಸಹಚರರ ಮೂಲಕ‌ ಹಣ ನೀಡಿ ತಮ್ಮ ಪರ ಫ್ಯಾನ್ಸ್ ಪೇಜ್‍ಗಳನ್ನ ಸೃಷ್ಟಿಸಿ ಅವುಗಳಲ್ಲಿ ರೀಲ್ಸ್, ವಿಡಿಯೋಗಳನ್ನ ಅಪ್‌ಲೋಡ್ ಮಾಡಿಸುತ್ತಿರುವುದು ತಿಳಿದು ಬಂದಿದೆ.

ಈಗಾಗಲೇ ಅಂಥಹ 60 ಖಾತೆಗಳನ್ನ ನಿಷ್ಕ್ರಿಯಗೊಳಿಸಲಾಗಿದ್ದು, ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಯಾರೂ ಸಹ ಅಂಥಹ ಕೃತ್ಯಗಳಲ್ಲಿ ಭಾಗಿಯಾಗಬಾರದು, ಒಂದು ವೇಳೆ ಭಾಗಿಯಾದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಿದ್ದೇವೆ' ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ‌.

ಇದನ್ನೂ ಓದಿ :ಬೆಂಗಳೂರು: 20 ವರ್ಷಗಳ ಬಳಿಕ ಕೊಲೆ ಕೇಸ್​ನಲ್ಲಿ ಬಂಧಿತನಾದ ಚಿತ್ರ ನಿರ್ದೇಶಕ - Film director arrested

ABOUT THE AUTHOR

...view details