ಚಿಕ್ಕಮಗಳೂರು:ಅಪಘಾತದ ಬಳಿಕಕಾರಿನ ಕೆಳಗೆ ಸಿಲುಕಿದ ಬೈಕ್ 60 ಮೀಟರ್ ದೂರ ಎಳೆದುಕೊಂಡು ಹೋಗಿರುವಂತಹ ಘಟನೆ ನಗರದ ಬೈಪಾಸ್ ಸಮೀಪದ ಕುರುವಂಗಿ ರಸ್ತೆಯಲ್ಲಿ ಜರುಗಿದೆ. ಬೈಕ್ನಿಂದ ಬೆಂಕಿಯ ಕಿಡಿ ಬರುತ್ತಿದ್ದರೂ ಅದನ್ನು ಲೆಕ್ಕಿಸದೇ, ರಭಸದಿಂದ ಸಾಗಿರುವ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ ಅನ್ನಿಸುವಂತಿದೆ.
ಬೈಕ್ ಉಜ್ಜಿಕೊಂಡು ಹೋಗುವ ರಭಸಕ್ಕೆ ಬೆಂಕಿ ಕಿಡಿ ಹಾರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ರಾಜಶೇಖರ್ ಎಂಬುವರಿಗೆ ಸೇರಿದ ಬೈಕ್ ಇದಾಗಿದ್ದು, ರೇಷನ್ ಅಂಗಡಿ ಕೆಲಸಗಾರ ಇವರು ಕೆಲಸ ಮುಗಿಸಿ ಹೋಗುವಾಗ ಈ ಅಪಘಾತ ನಡೆದಿದೆ.