ಕರ್ನಾಟಕ

karnataka

ETV Bharat / state

ಬೆಂಗಳೂರಿಗೆ ಬ್ರಿಟನ್​ ರಾಜ ಚಾರ್ಲ್ಸ್-3,​​ ರಾಣಿ ಕ್ಯಾಮಿಲ್ಲಾ ಖಾಸಗಿ ಭೇಟಿ

ಅಕ್ಟೋಬರ್ 27ರಂದು ಬೆಂಗಳೂರಿಗೆ ಆಗಮಿಸಿದ್ದ ಚಾರ್ಲ್ಸ್-3 ಮತ್ತು​ ರಾಣಿ ಕ್ಯಾಮಿಲ್ಲಾ ಇಂದು ಬ್ರಿಟನ್‌ಗೆ ವಾಪಸ್‌ ಆಗಿದ್ದಾರೆ.

britains-king-charles-on-a-personal-visit-to-bengaluru
ಬ್ರಿಟನ್​ ರಾಜ ಚಾರ್ಲ್ಸ್ 3 ಮತ್ತು ಪತ್ನಿ ರಾಣಿ ಕ್ಯಾಮಿಲ್ಲಾ (IANS)

By PTI

Published : Oct 30, 2024, 10:25 AM IST

Updated : 23 hours ago

ಬೆಂಗಳೂರು: ಬ್ರಿಟನ್​ ರಾಜ ಚಾರ್ಲ್ಸ್​ 3 ಮತ್ತು ಪತ್ನಿ ರಾಣಿ ಕ್ಯಾಮಿಲ್ಲಾ​ ಅವರು ಬೆಂಗಳೂರಿಗೆ ಖಾಸಗಿ ಭೇಟಿ ನೀಡಿ ವಾಪಸ್‌ ತೆರಳಿದ್ದಾರೆ.

ಪ್ರಕೃತಿ ಚಿಕಿತ್ಸೆ ಪಡೆಯುವ ಉದ್ದೇಶದಿಂದ ವೈಟ್​ಫೀಲ್ಡ್‌ನಲ್ಲಿರುವ ಸೌಖ್ಯ ಇಂಟರ್‌ನ್ಯಾಷನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್‌ನಲ್ಲಿ (SIHHC) ಅವರು ವಾಸ್ತವ್ಯ ಹೂಡಿದ್ದರು. ಇಲ್ಲಿ ಯೋಗ, ಧ್ಯಾನ ಸೇರಿದಂತೆ ಇತರೆ ಥೆರಪಿಗಳಲ್ಲಿ ಅವರು ಭಾಗಿಯಾಗಿದ್ದರು ಎಂಬ ಮಾಹಿತಿ ದೊರೆತಿದೆ.

ಅಕ್ಟೋಬರ್ 27ರಂದು ನಗರಕ್ಕೆ ಆಗಮಿಸಿರುವ ದಂಪತಿ ಇಂದು ಬ್ರಿಟನ್‌ಗೆ ವಾಪಸ್‌ ಆಗಿದ್ದಾರೆ.

ಬ್ರಿಟನ್ ರಾಜನಾಗಿ ಚಾರ್ಲ್ಸ್‌ ಅವರ ಪಟ್ಟಾಭಿಷೇಕ 2023ರ ಮೇ 6ರಂದು ಲಂಡನ್‌ನ ವೆಸ್ಟ್‌ ಮಿನಿಸ್ಟರ್‌ ಅಬ್ಬೆಯಲ್ಲಿ ವಿಜೃಂಭಣೆಯಿಂದ ನಡೆದಿತ್ತು.

ಇದನ್ನೂ ಓದಿ: ಆಯುರ್ವೇದ, ಹೋಮಿಯೋಪತಿಯಿಂದ ಕೊರೊನಾ ಮುಕ್ತರಾದ ಬ್ರಿಟನ್ ರಾಜಕುಮಾರ ಚಾರ್ಲ್ಸ್, ಪ್ರಾಣ ಉಳಿಸಿದ ಬೆಂಗಳೂರು ಆಸ್ಪತ್ರೆ

Last Updated : 23 hours ago

ABOUT THE AUTHOR

...view details