ಬೆಂಗಳೂರು: ಭಾರತದ ಖ್ಯಾತ ಎಲೆಕ್ಟ್ರಾನಿಕ್ ಕಂಪನಿ ಬಿಪಿಎಲ್ ಗ್ರೂಪ್ ಸಂಸ್ಥಾಪಕ ಟಿ ಪಿ ಗೋಪಾಲನ್ ನಂಬಿಯಾರ್ ಅವರು ಗುರುವಾರ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
94 ವರ್ಷ ವಯಸ್ಸಿನ ನಂಬಿಯಾರ್ ಅವರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಂಬಿಯಾರ್ ಭಾನುವಾರ ಬೆಳಿಗ್ಗೆ ನಿಧನರಾದರು ಎಂದು ಅವರು ಹೇಳಿದರು.
"... ಅವರು ಬೆಳಗ್ಗೆ 10.15 ರ ಸುಮಾರಿಗೆ ಮನೆಯಲ್ಲಿ ನಿಧನರಾದರು," ಎಂದು ಕುಟುಂಬದ ಸದಸ್ಯರು ತಿಳಿಸಿದರು.
ಟಿಪಿಜಿ ಎಂದೇ ಜನಪ್ರಿಯವಾಗಿರುವ ನಂಬಿಯಾರ್ ಅವರು ಬಿಜೆಪಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಅವರ ಮಾವ.
''ಬಿಪಿಎಲ್ ಗ್ರೂಪ್ ಅಧ್ಯಕ್ಷರಾದ ನನ್ನ ಮಾವ ಟಿಪಿಜಿ ನಂಬಿಯಾರ್ ಅವರ ನಿಧನದಿಂದ ನಾನು ಅತೀವ ದುಃಖಿತನಾಗಿದ್ದೇನೆ. ಓಂ ಶಾಂತಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರು ನಿಜವಾದ ದಾರ್ಶನಿಕರಾಗಿದ್ದರು ಮತ್ತು ಭಾರತದ ಅತ್ಯಂತ ವಿಶ್ವಾಸಾರ್ಹ ಗ್ರಾಹಕ ಬ್ರ್ಯಾಂಡ್‌ಗಳಲ್ಲಿ ಒಂದನ್ನು ಬೆಳೆಸಿದ್ದಾರೆ. ಅದು ಇಂದಿಗೂ ಜನಪ್ರಿಯವಾಗಿದೆ. #BelieveIn The Best ನಾನು ಉಪಚುನಾವಣೆಯ ಪ್ರಚಾರ ಕಾರ್ಯದಿಂದ ಬಿಡುವು ಪಡೆಯುತ್ತೇನೆ ಮತ್ತು ಈ ಸಂದರ್ಭದಲ್ಲಿ ಕುಟುಂಬದೊಂದಿಗೆ ಇರಲು ಬೆಂಗಳೂರಿಗೆ ಹಿಂತಿರುಗುತ್ತಿದ್ದೇನೆ'' ಎಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅವರ ನಿಧನಕ್ಕೆ ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಸಂತಾಪ ಸೂಚಿಸಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು , "ದೀರ್ಘಕಾಲದಿಂದಲೂ ನಿಕಟ ಪರಿಚಯವಿರುವ ಐಕಾನಿಕ್ ಬಿಪಿಎಲ್ ಬ್ರಾಂಡ್‌ನ ಸಂಸ್ಥಾಪಕ ಶ್ರೀ ಟಿಪಿಜಿ ನಂಬಿಯಾರ್ ಅವರ ನಿಧನದಿಂದ ದುಃಖವಾಗಿದೆ. ದೇಶದ ವ್ಯಾಪಾರೋದ್ಯಮದಲ್ಲಿ ಅವರ ಅಗಾಧ ಕೊಡುಗೆ ಮತ್ತು ಪರಂಪರೆ ಇದೆ. ಅವರ ನಿಧನಕ್ಕೆ ನನ್ನ ಸಂತಾಪ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಬರೆದಿದ್ದಾರೆ. PTI