ಕರ್ನಾಟಕ

karnataka

ETV Bharat / state

ಅಮ್ಮ- ಮಗ ಇಬ್ಬರೂ ಒಟ್ಟಿಗೆ ಎಸ್​ಎಸ್​ಎಲ್​ಸಿ ಪಾಸ್: ಹಾಸನದಲ್ಲಿ ಅಪರೂಪದ ಸಾಧನೆ - mother and son passed SSLC

ಹಾಸನದಲ್ಲಿ ಅಮ್ಮ ಹಾಗೂ ಮಗ ಇಬ್ಬರೂ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

SSLC
ಅಮ್ಮ- ಮಗ ಇಬ್ಬರೂ ಒಟ್ಟಿಗೆ ಎಸ್​ಎಸ್​ಎಲ್​ಸಿ ಪಾಸ್ (ETV Bharat)

By ETV Bharat Karnataka Team

Published : May 9, 2024, 6:43 PM IST

ಹಾಸನ : ಇಂದು ಪ್ರಕಟವಾದ ಎಸ್‌ಎಸ್‌ಎಲ್​ಸಿ ಪರೀಕ್ಷೆ ಫಲಿತಾಂಶದಲ್ಲಿ ಅಪರೂಪದ ವಿಷಯವೊಂದಿದೆ. ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ತಾಯಿ-ಮಗ ಇಬ್ಬರೂ ಪಾಸ್ ಆದ ಖುಷಿ ಅನುಭವಿಸುತ್ತಿದ್ದಾರೆ.

ಸಿ. ಬಿ ನಿತಿನ್ ಪರೀಕ್ಷಾ ಫಲಿತಾಂಶ (ETV Bharat)

ಹೌದು, ಹಾಸನ ಜಿಲ್ಲೆಯ ಆಲೂರು ತಾಲೂಕಿನ ಚಿನ್ನಳ್ಳಿ ಗ್ರಾಮದ ನಿವಾಸಿಯಾದ ಭುವನೇಶ್ ಪತ್ನಿ ಟಿ. ಆರ್ ಜ್ಯೋತಿ (38) ಪುನರಾವರ್ತಿತ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದರೆ, ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ವಿವೇಕ ಕಾನ್ವೆಂಟ್ ವಿದ್ಯಾರ್ಥಿಯಾಗಿ ಮಗ ಸಿ. ಬಿ ನಿತಿನ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದನು.

ಟಿ. ಆರ್ ಜ್ಯೋತಿ ಪರೀಕ್ಷಾ ಫಲಿತಾಂಶ (ETV Bharat)

ಇಂದು ಫಲಿತಾಂಶ ಪ್ರಕಟವಾಗಿದ್ದು, 250 ಅಂಕ ಪಡೆದು ತಾಯಿ ಟಿ. ಆರ್ ಜ್ಯೋತಿ ಹಾಗೂ ಅವರ ಪುತ್ರ ಸಿ. ಬಿ ನಿತಿನ್ 582 ಅಂಕ ಪಡೆದು ತೇರ್ಗಡೆಯಾಗಿದ್ದಾರೆ. ಅಮ್ಮ- ಮಗ ಇಬ್ಬರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ಕುಟುಂಬದಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ.

ಇದನ್ನೂ ಓದಿ :ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಫಸ್ಟ್ ಬಂದ ರೈತನ ಮಗಳು: IAS ಅಧಿಕಾರಿಯಾಗುವ ಕನಸು - SSLC Topper

ABOUT THE AUTHOR

...view details