ಗಂಗಾವತಿ:ರಜೆ ಕಳೆಯಲು ಸ್ನೇಹಿತರೊಂದಿಗೆ ಬಂದು, ಈಜಾಡಲು ಹೋಗಿದ್ದ ಸಂದರ್ಭದಲ್ಲಿ ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋಗಿದ್ದ ಹೈದರಾಬಾದ್ನ ಖಾಸಗಿ ಆಸ್ಪತ್ರೆಯ ವೈದ್ಯೆ ಅನನ್ಯ ಮೋಹನ್ರಾವ್ ಅವರ ಮೃತದೇಹ ಗುರುವಾರ ಪತ್ತೆಯಾಗಿದೆ.
ಅನನ್ಯ ಮೋಹನ್ರಾವ್ ಅವರು ತಾಲೂಕಿನ ಸಣಾಪುರದ ಸಮೀಪ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಸುಮಾರು 16 ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ಮೃತದೇಹವನ್ನು ನದಿಯಿಂದ ಮೇಲೆತ್ತಲಾಗಿದೆ.
ನದಿಯಲ್ಲಿನ ಕಲ್ಲು ಬಂಡೆಗಳ ಕೊರಕಲು ಸಂದಿಯಲ್ಲಿ ಮೃತದೇಹ ಸಿಲುಕಿಕೊಂಡಿತ್ತು. ಇದನ್ನು ಸ್ಥಳೀಯ ಈಜುಗಾರರು ಗಮನಿಸಿದ್ದಾರೆ. ಅಲ್ಲಿಗೆ ತೆರಳಿ ಪ್ರಯಾಸಪಟ್ಟು ಕೊರಕಲುಗಳ ಮಧ್ಯೆ ಸಿಲುಕಿದ್ದ ಶವವನ್ನು ಹರಸಾಹಸಪಟ್ಟು ಹೊರತಂದಿದ್ದಾರೆ.