ಕರ್ನಾಟಕ

karnataka

ETV Bharat / state

BMTC ಡಿಜಿಟಲ್​ ಮೈಲಿಗಲ್ಲು: ಒಂದೇ ದಿನ UPI ಮೂಲಕ ಒಂದು ಕೋಟಿ ಆದಾಯ - UPI BENEFITS BMTC

ಫೆಬ್ರವರಿ 3ರಂದು ಬಿಎಂಟಿಸಿ ಬಸ್​ಗಳಲ್ಲಿ ಯುಪಿಐ ಮೂಲಕ ಬಿಎಂಟಿಸಿ ಒಂದು ಕೋಟಿ ಆದಾಯ ಗಳಿಸಿದೆ.

BMTC EARNS ONE CRORE IN REVENUE THROUGH UPI IN A SINGLE DAY
BMTC ಡಿಜಿಟಲ್​ ಮೈಲಿಗಲ್ಲು: ಒಂದೇ ದಿನ UPI ಮೂಲಕ ಒಂದು ಕೋಟಿ ಆದಾಯ (ETV Bharat)

By ETV Bharat Karnataka Team

Published : Feb 6, 2025, 6:44 AM IST

ಬೆಂಗಳೂರು:ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್​ಗಳಲ್ಲಿ ಡಿಜಿಟಲ್ ಮೂಲಕ ಟಿಕೆಟ್ ಖರೀದಿಸುವ ಸೌಲಭ್ಯ ನೀಡಿದ್ದು, ಪ್ರಯಾಣಿಕರು ಯುಪಿಐ ಮೂಲಕ ಹಣವನ್ನು ಪಾವತಿಸಿ ಟಿಕೆಟ್ ಪಡೆಯುತ್ತಿದ್ದಾರೆ.

ಬಿಎಂಟಿಸಿ ಡಿಜಿಟಲ್ ಮೈಲಿಗಲ್ಲು ಸಾಧಿಸಿದ್ದು, ಫೆಬ್ರವರಿ 3ರಂದು ಒಂದೇ ದಿನ ಯುಪಿಐ ಮೂಲಕ ಒಂದು ಕೋಟಿ ಆದಾಯ ಬಿಎಂಟಿಸಿ ಸಂಸ್ಥೆಗೆ ಬಂದಿದೆ.

ಬಿಎಂಟಿಸಿ ಸಂಸ್ಥೆ ಮಾಹಿತಿ ಪ್ರಕಾರ, "ದಿನದಿಂದ ದಿನಕ್ಕೆ ಹೆಚ್ಚು ಪ್ರಯಾಣಿಕರು ಯುಪಿಐ ಮೂಲಕ ಹಣವನ್ನು ಪಾವತಿಸಿ ಟಿಕೆಟ್ ಪಡೆಯುತ್ತಿದ್ದಾರೆ. ಜನವರಿ 5ರಂದು ಸರ್ಕಾರಿ ಸಾರಿಗೆ ಬಸ್​​ಗಳ ಪ್ರಯಾಣ ದರವನ್ನು ಶೇಕಡಾ 15ರಷ್ಟು ಹೆಚ್ಚಳ ಮಾಡಿತು. ಅನಂತರ ಯುಪಿಐ ಮೂಲಕ ಟಿಕೆಟ್ ಪಡೆಯುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ".

"ಜನವರಿ 9ರಂದು 56.6 ಲಕ್ಷ, ಜನವರಿ 13ರಂದು 60.05 ಲಕ್ಷ, ಜನವರಿ 20ರಂದು 80.01 ಲಕ್ಷ, ಜನವರಿ 27ರಂದು 90.9, ಫೆಬ್ರವರಿ 3 ರಂದು 1.03 ಕೋಟಿ ಆದಾಯ ಯುಪಿಐ ಮೂಲಕ ಬಿಎಂಟಿಸಿ ಸಂಸ್ಥೆಗೆ ಆದಾಯ ಬಂದಿದೆ. ಬಿಎಂಟಿಸಿ ಬಸ್​ಗಳಲ್ಲಿ ಕ್ಯೂಆರ್​ ಕೋಡ್​ನ್ನು 2023 ರಿಂದ ಪರಿಚಯಿಸಲಾಗಿತ್ತು. ಮೊದಲ ಯುಪಿಐ ಮೂಲಕ ಶೇಕಡಾ 10ರಷ್ಟು ಆದಾಯ ಯುಪಿಐ ಮೂಲಕ ಬರುತ್ತಿತ್ತು. ಈಗ ಶೇಕಡಾ 30 ರಷ್ಟು ಆದಾಯ ಯುಪಿಐ ಮೂಲಕ ಬರುತ್ತಿದೆ".

"ಪ್ರತಿಯೊಂದು ಬಿಎಂಟಿಸಿ ಬಸ್​ಗಳಲ್ಲಿ ಯುಪಿಐ ಮೂಲಕ ಹಣವನ್ನು ಪಾವತಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಡಿಜಿಟಲ್ ಹಣ ಪಾವತಿಯಿಂದ ಪ್ರಯಾಣಿಕರ ಮತ್ತು ನಿರ್ವಾಹಕರ ನಡುವಿನ ಚಿಲ್ಲರೆ ಸಮಸ್ಯೆ ಇಲ್ಲದಂತ್ತಾಗಿದೆ" ಎಂದು ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ:ವಿಧಾನಸೌಧದಲ್ಲಿ ಬೀದಿ ನಾಯಿಗಳ ಹಾವಳಿಗೆ ಅಂಕುಶ ಹಾಕಲು ಸ್ಪೀಕರ್ ಹೊಸ ಪ್ಲಾನ್!

ABOUT THE AUTHOR

...view details