ಕರ್ನಾಟಕ

karnataka

ETV Bharat / state

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರೆ ಹೇಗೆ?: ಬಿ.ಕೆ ಹರಿಪ್ರಸಾದ್

ಸಿಸಿಬಿ ತನಿಖೆ ಬಗ್ಗೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.​

ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್
ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್

By ETV Bharat Karnataka Team

Published : Jan 20, 2024, 2:28 PM IST

ಬೆಂಗಳೂರು : ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತನಾಡಿಲ್ಲ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರೆ ಹೇಗೆ? ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಧ್ರಾ ಮಾದರಿ ಘಟನೆ ನಡೆಯಬಹುದು ಎಂಬ ಹೇಳಿಕೆಗೆ ಸಿಸಿಬಿ ಪೊಲೀಸರ ವಿಚಾರಣೆ ವಿಚಾರವಾಗಿ ಸಿದ್ದರಾಮಮಯ್ಯ ಅವರ ಗಮನಕ್ಕೆ ತಂದಿದ್ದೇವೆ ಅಂತ ಪೊಲೀಸರು ಹೇಳಿದ್ದಾರೆ. ಆದರೆ ಇದು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್​ ಅವರ ಗಮನಕ್ಕೆ ಬಂದಿಲ್ಲ ಅನ್ನಿಸುತ್ತದೆ. ನಾನು ಎಂದೂ ಸಿಎಂ ಹೆಸರೇಳಿ, ಅವರ ವಿರುದ್ಧ ಮಾತಾಡಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರೆ ಹೇಗೆ? ಎಂದು ಹೇಳಿದರು.

ನನ್ನ ಹೇಳಿಕೆ ಸಂಬಂಧ ರಾಜ್ಯಪಾಲರಿಗೆ ಬಿಜೆಪಿಯವರು ದೂರು ಕೊಟ್ಟಿದ್ದರು. ವಿಚಾರಣೆ ಮಾಡಿ ತಿಳಿಸಿ ಎಂದು ರಾಜ್ಯಪಾಲರು ಹೇಳಿರಬೇಕು. ಹಾಗಾಗಿ ಇಷ್ಟೊಂದು ಕ್ಷಿಪ್ರವಾಗಿ ಇದು ಬಂದಿದೆ. ಎಲ್ಲಾ ಪ್ರಕರಣಗಳು ಹೀಗೆ ಆದರೆ ಉತ್ತಮ. ನಮಗೆ ಮಾತ್ರ ಹೀಗೆ ಅಂದ್ರೆ ಉತ್ತರ ಹುಡುಕಬೇಕಾಗುತ್ತದೆ. ರಾಜ್ಯಪಾಲರು ಸಂವಿಧಾನದ ಒಂದು ಅಂಗ ಇದ್ದಂತೆ. ನಾನು ಪರಿಷತ್ ಸದಸ್ಯ, ನನ್ನ ವಿಚಾರಣೆಗೆ ಸಭಾಪತಿ ಅವರ ಅನುಮತಿ ತೆಗೆದುಕೊಳ್ಳಬೇಕಿತ್ತು. ಆದರೆ ಇಲ್ಲಿ ಶಿಷ್ಟಾಚಾರದ ಉಲ್ಲಂಘನೆ ಕೂಡ ಆಗಿದೆ ಎಂದು ಬಿ ಕೆ ಹರಿಪ್ರಸಾದ್​ ತಿಳಿಸಿದರು.

ಒಳ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ ಕೆ ಹರಿಪ್ರಸಾದ್​ ಅವರು, ಒಳ ಮೀಸಲಾತಿ ವಿಚಾರ ಹಲವಾರು ವರ್ಷಗಳಿಂದಲೂ ಇದೆ. ದೆಹಲಿಯಲ್ಲಿ ರೋಹಿಣಿ ಕಮಿಷನ್ ಅಂತಲೂ ಮಾಡಿದ್ದಾರೆ. ಸರ್ಕಾರ ತೀರ್ಮಾನ ಈವಾಗ ತೆಗೆದುಕೊಂಡಿದೆ. ಹಿಂದೆ ಬಿಜೆಪಿ ತೀರ್ಮಾನ ತೆಗೆದುಕೊಂಡು ಕೇಂದ್ರಕ್ಕೆ ಕಳಿಸಿದ್ದರು. ಆಗ ಅವರು ಗೊತ್ತಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಏನೇ ಆಗಬೇಕು ಅಂದರೆ ಸಂಸತ್ತಿಗೆ ಬರಬೇಕು ಎಂದರು.

ಇದನ್ನೂ ಓದಿ :'ನಾನು ಸಿಎಂ ಸಿದ್ದರಾಮಯ್ಯ ವಕ್ತಾರನಲ್ಲ': ಬಿ.ಕೆ. ಹರಿಪ್ರಸಾದ್​

ABOUT THE AUTHOR

...view details