ಕರ್ನಾಟಕ

karnataka

ETV Bharat / state

ಪಿಎಸ್​ಐ ಪರಶುರಾಮ್ ಕುಟುಂಬಕ್ಕೆ ಸರ್ಕಾರ ನ್ಯಾಯ ಕೊಡಿಸಲಿ: ಸಂಸದ ಜಗದೀಶ್ ಶೆಟ್ಟರ್ - PSI Parshuram Death Case - PSI PARSHURAM DEATH CASE

ಪಿಎಸ್​ಐ ಪರಶುರಾಮ್​ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಂಸದ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರ ಆ ಕುಟುಂಬಕ್ಕೆ ನ್ಯಾಯ ಕೊಡಿಸಲಿ ಎಂದು ಒತ್ತಾಯಿಸಿದರು.

mp-jagadish-shettar
ಸಂಸದ ಜಗದೀಶ್ ಶೆಟ್ಟರ್ (ETV Bharat)

By ETV Bharat Karnataka Team

Published : Aug 12, 2024, 5:13 PM IST

ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ (ETV Bharat)

ಹುಬ್ಬಳ್ಳಿ:ಪಿಎಸ್ಐ ಪರಶುರಾಮ್ ಸಾವು ಪ್ರಕರಣದಲ್ಲಿ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಸಂತ್ರಸ್ತನ ಕುಟುಂಬಕ್ಕೆ ಸರ್ಕಾರ ನ್ಯಾಯ ಕೊಡಿಸಬೇಕು ಎಂದು ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆಡೆ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ರಕ್ಷಿಸುವ ಕೆಲಸದಲ್ಲಿ ನಿರತವಾಗಿದೆ. ಆದರೆ ಇನ್ನೊಂದೆಡೆ, ಪರಶುರಾಮ್ ಕುಟುಂಬಸ್ಥರು ನೋವಿನಲ್ಲಿದ್ದಾರೆ. ಅವರ ಹೇಳಿಕೆಯನ್ನು ಇದುವರೆಗೂ ಪಡೆದಿಲ್ಲ. ನಿಮಗೆ ತಾಕತ್ ಇದ್ದರೆ ಮೊದಲು ಆರೋಪಿಗಳನ್ನು ಅರೆಸ್ಟ್ ಮಾಡಿ ಎಂದರು.

ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಪರಶುರಾಮನ ಕುಟುಂಬಸ್ಥರ ಶಾಪ ಈ ಸರ್ಕಾರಕ್ಕೆ ತಟ್ಟೇ ತಟ್ಟುತ್ತದೆ. ನಾನು ನಿನ್ನೆ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಈ ವೇಲೆ ಕುಟುಂಬದವರು ಮಾತನಾಡುತ್ತಾ, ನಾವು ಹಣ ಕೊಟ್ಟಿದ್ದೀವಿ ಅಂದಿದ್ದಾರೆ‌. ಈಗ ಅವರ ಹಣವೂ ಹೋಯ್ತು, ಜೀವನವೂ ಹೋಯ್ತು. ಇದನ್ನು ನೋಡಿದರೆ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಪಿಎಸ್​ಐ ಪರಶುರಾಮ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಘೋಷಣೆ: ಗೃಹ ಸಚಿವ ಪರಮೇಶ್ವರ್ - PSI Death Case

ABOUT THE AUTHOR

...view details