ಕೊಪ್ಪಳ:ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ 19 ಕೊಚ್ಚಿಕೊಂಡು ಹೋಗಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಈ ಮಧ್ಯೆ ಇಂದು ತುಂಗಭದ್ರಾ ಡ್ಯಾಂಗೆ ಬಿಜೆಪಿ ನಾಯಕರ ನಿಯೋಗ ಭೇಟಿ ನೀಡಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12-30ಕ್ಕೆ ಡ್ಯಾಂಗೆ ನಿಯೋಗ ಆಗಮಿಸಿ, ಡ್ಯಾಮ್ ಪರಿಶೀಲನೆ ನಡೆಸಲಿದ್ದಾರೆ. ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ನಾಯಕರು ಆಗಮಿಸಲಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್ನಲ್ಲಿರುವ ಪಂಪ ಸಾಗರ ಜಲಾಶಯ ಇದಾಗಿದೆ.
ಜಲಾಶಯದಿಂದ ಅಪಾರ ನೀರು ಹೊರಕ್ಕೆ:ಸದ್ಯ ನದಿಗೆ 89,015 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಸುಮಾರು 14 ಟಿಎಂಸಿ ನೀರು ನಿನ್ನೆ ರಾತ್ರಿ 11 ಗಂಟೆಯಿಂದ ನದಿಗೆ ಹರಿದುಹೋಗುತ್ತಿದೆ. ಜಲಾಶಯಕ್ಕೆ 18,420 ಕ್ಯೂಸೆಕ್ ಒಳಹರಿವು ಇದೆ. ಸದ್ಯ 1,631.64 ಅಡಿ ಹಾಗೂ 100.367 ಟಿಎಂಸಿ ನೀರು ಸಂಗ್ರಹವಿದೆ. ಕಾಲುವೆ ಸೇರಿ ಒಟ್ಟು 99,890 ಕ್ಯೂಸೆಕ್ ಹೊರಹರಿವು ಇದೆ. ಕ್ರಸ್ಟ್ ಗೇಟ್ ರಿಪೇರಿ ಮಾಡಲು ಜಲಾಶಯದಿಂದ ಇನ್ನೂ 60 ಟಿಎಂಸಿ ನೀರು ಖಾಲಿ ಮಾಡಬೇಕು ಎನ್ನಲಾಗುತ್ತಿದೆ.
ಇದನ್ನೂ ಓದಿ:ತುಂಗಭದ್ರಾ ಡ್ಯಾಂನ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಡಿತ: ಕಂಪ್ಲಿ ಸೇತುವೆ ಮೇಲೆ ಸಂಚಾರ ನಿಷೇಧ - TRAFFIC PROHIBITED ON KAMPLI BRIDGE