ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಪಿಜಿಗೆ ನುಗ್ಗಿ ಯುವತಿಯ ಕೊಲೆ ಪ್ರಕರಣ: ಹತ್ಯೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ - Bengaluru PG Woman Murder Case - BENGALURU PG WOMAN MURDER CASE

ಕಳೆದ ಮಂಗಳವಾರ ಬೆಂಗಳೂರಿನ ಪಿಜಿಯೊಳಗೆ ನುಗ್ಗಿದ ಕಿಡಿಗೇಡಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ. ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಲಭ್ಯವಾಗಿದೆ.

CCTV FOOTAGE  YOUNG WOMAN MURDER CASE  BENGALURU  POLICE INVESTIGATION
ಪಿಜಿ ಯುವತಿಯ ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ (ETV Bharat)

By ETV Bharat Karnataka Team

Published : Jul 26, 2024, 12:29 PM IST

ಪಿಜಿ ಯುವತಿ ಕೊಲೆಯ ಸಿಸಿಟಿವಿ ದೃಶ್ಯ (ETV Bharat)

ಬೆಂಗಳೂರು:ನಗರದಕೋರಮಂಗಲದ ಪಿಜಿಯಲ್ಲಿ(ಪೇಯಿಂಗ್‌ ಗೆಸ್ಟ್‌) ಇತ್ತೀಚಿಗೆ ನಡೆದ ಯುವತಿಯ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಇದರ ನಡುವೆ, ಕೃತಿ ಕುಮಾರಿ ಎಂಬ ಯುವತಿಯನ್ನು ಆಕೆಯ ಸ್ನೇಹಿತ ಅಭಿಷೇಕ್ ಎಂಬಾತ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆ ಮಾಡಿರುವ ಸಿಸಿಟಿವಿ ದೃಶ್ಯ ದೊರೆತಿದೆ.

ಪ್ರಕರಣವೇನು?: ಜುಲೈ 23ರಂದು ರಾತ್ರಿ ಪಿಜಿಗೆ ನುಗ್ಗಿದ ಅಭಿಷೇಕ್, ತನ್ನ ಗೆಳತಿ ತಂಗಿದ್ದ ಕೊಠಡಿಯ ಬಾಗಿಲು ತಟ್ಟಿದ್ದಾನೆ.‌ ಬಾಗಿಲು ತೆರೆಯುತ್ತಿದ್ದಂತೆ ಮೇಲೆ ಮನಸೋಇಚ್ಛೆ ಚಾಕುವಿನಿಂದ ಇರಿದಿದ್ದಾನೆ.‌ ಪ್ರಾಣ ಉಳಿಸಿಕೊಳ್ಳಲು ಯುವತಿ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರೂ ಆರೋಪಿ ಹೊಟ್ಟೆ, ಕುತ್ತಿಗೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ.

ಭೋಪಾಲ್ ಮೂಲದ ಅಭಿಷೇಕ್ ಮತ್ತು ಕೃತಿ ಕುಮಾರಿ‌ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಖಾಸಗಿ ಕಂಪನಿಯೊಂದರಲ್ಲಿ‌ ಕೆಲಸ ಮಾಡುತ್ತಿದ್ದರು. ಯುವತಿ ನೆಲೆಸಿದ್ದ ಪಿಜಿಗೆ ಅಭಿಷೇಕ್ ಬಂದು ಹೋಗುತ್ತಿದ್ದ. ಇತ್ತೀಚೆಗೆ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ತಾನು ಕೆಲಸ ಮಾಡುತ್ತಿದ್ದ ಕಂಪನಿ ತೊರೆದಿದ್ದ ಅಭಿಷೇಕ್ ನಿರುದ್ಯೋಗಿಯಾಗಿದ್ದ. ಭೋಪಾಲ್​ಗೆ ತೆರಳಿ ಕೆಲಸ ಮಾಡುತ್ತಿರುವುದಾಗಿ ಯುವತಿಗೆ ಸುಳ್ಳು ಹೇಳುತ್ತಿದ್ದ.

ಈ ವಿಷಯ ತಿಳಿಯುತ್ತಿದ್ದಂತೆ ಆಕೆ, ನೀನು ಕೆಲಸಕ್ಕೆ ಹೋಗು ಎಂದು ಹೇಳುತ್ತಿದ್ದಳು. ಹೀಗಿದ್ದರೂ ಕೆಲಸಕ್ಕೆ ಹೋಗದೆ ಸುತ್ತಾಡುತ್ತಿದ್ದ‌. ಇದನ್ನರಿತ ಕೃತಿ, ಆತನನ್ನು ದೂರ ಮಾಡುತ್ತಿದ್ದಳು. ಹೀಗಾಗಿ, ಆಗಾಗ್ಗೆ ಪಿಜಿ ಸಮೀಪ ಬಂದು ಅಭಿಷೇಕ್ ಗಲಾಟೆ ಮಾಡುತ್ತಿದ್ದ. ಮನನೊಂದ ಕೃತಿ ಪಿಜಿಯನ್ನೂ ಬದಲಿಸಿದ್ದಳು. ಇದರಿಂದ ಕಂಗೆಟ್ಟ ಆರೋಪಿ ಹಲವು ಬಾರಿ ಫೋನ್ ಮಾಡಿದ್ದಾನೆ. ಯುವತಿ ಉತ್ತರಿಸುತ್ತಿರಲಿಲ್ಲ. ಕೊನೆಗೆ, ಹೇಗೋ ಯುವತಿ ನೆಲೆಸಿದ್ದ ಪಿಜಿಯ ವಿಳಾಸ ಕಂಡುಹಿಡಿದು ಚಾಕುವಿನಿಂದ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಪಿಜಿಯೊಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ, ತನಿಖೆಗೆ ವಿಶೇಷ ತಂಡ ರಚನೆ - Murder Inside PG Accommodation

ABOUT THE AUTHOR

...view details