ಕರ್ನಾಟಕ

karnataka

ETV Bharat / state

ಬಿಡಿಎ ಕಾರ್ಯಾಚರಣೆ: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 19 ಎಕರೆ ಆಸ್ತಿ ವಶ - BDA OPERATION

ತನ್ನ ಆಸ್ತಿಯನ್ನು ಮರು ವಶಪಡಿಸಿಕೊಳ್ಳಲು ಬಿಡಿಎ ಕಾರ್ಯಾಚರಣೆ ಆರಂಭಿಸಿದೆ.

BDA operation: 19 acres of property seized in Nadaprabhu Kempegowda Layout.
ಬಿಡಿಎ ಕಾರ್ಯಾಚರಣೆ: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 19 ಎಕರೆ ಆಸ್ತಿ ವಶ (ETV Bharat)

By ETV Bharat Karnataka Team

Published : Jan 16, 2025, 8:37 PM IST

ಬೆಂಗಳೂರು:ಬಿಡಿಎ ಆಸ್ತಿ ಮರುವಶ ಮಾಡಿಕೊಳ್ಳಲು ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 19 ಎಕರೆ ಆಸ್ತಿ ವಶಪಡಿಸಿಕೊಂಡಿದೆ.

ಬೆಂಗಳೂರು ಉತ್ತರ ತಾಲೂಕು, ಯಶವಂತಪುರ ಹೋಬಳಿ, ಮಾಚೋಹಳ್ಳಿ ಗ್ರಾಮದಲ್ಲಿ 16 ಎಕರೆ, ಕನ್ನಲ್ಲಿ ಗ್ರಾಮದಲ್ಲಿ 2 ಎಕರೆ ಮತ್ತು ಕೆಂಚನಪುರ ಗ್ರಾಮದಲ್ಲಿ 1 ಎಕರೆ ಪ್ರದೇಶವನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಪ್ರದೇಶದಲ್ಲಿ ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸಿ ಒಟ್ಟಾರೆ 19 ಎಕರೆ ಪ್ರದೇಶವನ್ನು ಪ್ರಾಧಿಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ.

ಬಿಡಿಎ ಕಾರ್ಯಾಚರಣೆ: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 19 ಎಕರೆ ಆಸ್ತಿ ವಶ (ETV Bharat)
ಬಿಡಿಎ ಕಾರ್ಯಾಚರಣೆ: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 19 ಎಕರೆ ಆಸ್ತಿ ವಶ (ETV Bharat)

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎಂ.ಎ.ಆರ್. ರಸ್ತೆ ಒಟ್ಟು 10.3 ಕಿ.ಮೀ ಉದ್ದವಿದ್ದು, ಅದರಲ್ಲಿ 8 ಕಿ.ಮೀ. ರಸ್ತೆ ಪೂರ್ಣಗೊಂಡಿದೆ. ಉಳಿದ 2 ಕಿ.ಮೀ. ರಸ್ತೆಯ ಜಮೀನುಗಳಿಗೆ ನ್ಯಾಯಾಲಯದ ತಡೆಯಾಜ್ಞೆಯಿದ್ದು, ಪ್ರಸ್ತುತ ತಡೆಯಾಜ್ಞೆ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಿ, ರಸ್ತೆ ಕಾಮಗಾರಿಯು ಭರದಿಂದ ಪ್ರಾರಂಭಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಬಿಡಿಎ ಕಾರ್ಯಾಚರಣೆ: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 19 ಎಕರೆ ಆಸ್ತಿ ವಶ (ETV Bharat)
ಬಿಡಿಎ ಕಾರ್ಯಾಚರಣೆ: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 19 ಎಕರೆ ಆಸ್ತಿ ವಶ (ETV Bharat)

ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರಕ್ಷಕ ಅಧೀಕ್ಷಕ, ನಾಡಪ್ರಭು ಕೆಂಪೇಗೌಡ ವಿಭಾಗದ ಕಾರ್ಯಪಾಲಕ ಅಭಿಯಂತರ, ಬಿಡಿಎ ಕಾರ್ಯಪಡೆ ಹಾಗೂ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ನೆರವೇರಿಸಲಾಯಿತು ಎಂದು ಹೇಳಿದ್ದಾರೆ.

ಇದನ್ನು ಓದಿ:ಹರಕೆ ಗೂಳಿಯ ಬಾಲ ಕತ್ತರಿಸಿದ ಕಿಡಿಗೇಡಿಗಳು; ಪೊಲೀಸರಿಂದ ಪರಿಶೀಲನೆ

ABOUT THE AUTHOR

...view details