ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ನಿಷೇಧಿತ ಪಿಎಫ್ಐ ಮುಖಂಡನ ಬಂಧನ

ದಾವಣಗೆರೆ ಜಿಲ್ಲೆಯ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡನನ್ನು ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪಿಎಫ್ಐ ಮುಖಂಡನ ಬಂಧನ
ಪಿಎಫ್ಐ ಮುಖಂಡನ ಬಂಧನ

By ETV Bharat Karnataka Team

Published : Feb 16, 2024, 3:22 PM IST

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ

ಬೆಂಗಳೂರು:ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಮುಖಂಡನನ್ನು ನಗರದ ಕೆ.ಜಿ.ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ತಾಹೀರ್ ಹುಸೇನ್ ಬಂಧಿತ ಆರೋಪಿ.

ಕೋಮು‌ ಸೌಹಾರ್ದತೆ ಕದಡುವ ಉದ್ದೇಶದಿಂದ ಕಾರ್ಯಪ್ರವೃತ್ತವಾಗಿದ್ದ ಆರೋಪದಡಿ ಪಿಎಫ್ಐ ಸಂಘಟನೆ ನಿಷೇಧಿಸಿದ ಬಳಿಕ 2022ರಲ್ಲಿ ರಾಜ್ಯಾದ್ಯಂತ ಅದರ ಸದಸ್ಯರ ಮನೆಗಳು, ಕಚೇರಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಪೈಕಿ 15 ಜನರನ್ನು ಬಂಧಿಸಲಾಗಿತ್ತು. ಪಿಎಫ್ಐ ಸಂಘಟನೆಯ 19 ಮುಖಂಡರ ವಿರುದ್ಧ ಯುಎಪಿಎ ಕಾಯ್ದೆಯಡಿ ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು.

ದಾವಣಗೆರೆ ಜಿಲ್ಲೆಯ ಪಿಎಫ್ಐ ಜನರಲ್ ಸೆಕ್ರೆಟರಿಯಾಗಿದ್ದ ತಾಹಿರ್ ಹುಸೇನ್ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದನು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು‌ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಇದನ್ನೂ ಓದಿ:'ಸಿದ್ದರಾಮಯ್ಯ, ಡಿಕೆಶಿಗೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಆರೋಪಿಗಳು ಕಾಣ್ತಿಲ್ಲ; ಹಿಂದೂ ಕಾರ್ಯಕರ್ತರಷ್ಟೇ ಕಾಣ್ತಾರೆ'

ABOUT THE AUTHOR

...view details