ಕರ್ನಾಟಕ

karnataka

ಬಾಗಲಕೋಟೆಯಲ್ಲಿ ಬಿಜೆಪಿ ಜಯಭೇರಿ: ಅಭ್ಯರ್ಥಿಗಳು ಹೀಗಂದ್ರು - Bagalkote Lok Sabha Election Results

By ETV Bharat Karnataka Team

Published : Jun 4, 2024, 8:05 PM IST

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ವಿಜೇತ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

PC Gaddigoudar and Samyuktha Patil
ಪಿ.ಸಿ.ಗದ್ದಿಗೌಡರ್ ಹಾಗೂ ಸಂಯುಕ್ತ ಪಾಟೀಲ್ (ETV Bharat)

ಬಾಗಲಕೋಟೆಯಲ್ಲಿ ಮತ್ತೆ ಅರಳಿದ ಕಮಲ (ETV Bharat)

ಬಾಗಲಕೋಟೆ:ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿಸಿದಂತೆ ಬಿಜೆಪಿ ಜಯಭೇರಿ ಬಾರಿಸಿದೆ. ತನ್ನ ಭದ್ರಕೋಟೆಯನ್ನು ಬಿಜೆಪಿ ಉಳಿಸಿಕೊಂಡಿದೆ. ಪಿ.ಸಿ.ಗದ್ದಿಗೌಡರ ಕೇಸರಿ ಬಾವುಟ ಹಾರಿಸಿದ್ದಾರೆ.

ಮತ ಎಣಿಕೆಯ ಸಂದರ್ಭದಲ್ಲಿ ಮೊದಲೆರಡು ಸುತ್ತುಗಳಲ್ಲಿ ಮಾತ್ರ ಕಾಂಗ್ರೆಸ್ ಎರಡು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿತ್ತು. ಇದನ್ನು ಬಿಟ್ಟರೆ, ಉಳಿದ 17 ಸುತ್ತುಗಳಲ್ಲಿ ಬಿಜೆಪಿ ಮತಗಳು ಏರಿಕೆಯಾಗಿ ಕೊನೆಗೆ 68,399 ಮತಗಳ ಅಂತರದಿಂದ ಪಿ.ಸಿ.ಗದ್ದಿಗೌಡರಿಗೆ ಗೆಲುವಾಯಿತು.

ಪಿ.ಸಿ.ಗದ್ದಿಗೌಡರು ಪಡೆದ ಒಟ್ಟು ಮತಗಳು 6,71,039 (6,67,441 +3,598 ಅಂಚೆ ಮತಗಳು).
ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪಡೆದ ಒಟ್ಟು ಮತಗಳು- 6,02,640 (6,00,741+1,899 ಅಂಚೆ ಮತಗಳು). ಬಿಜೆಪಿ ಪಡೆದ ಒಟ್ಟು ಲೀಡ್- 68,399 ಮತಗಳು.

ಪಿ.ಸಿ.ಗದ್ದಿಗೌಡರ ಮಾತನಾಡಿ, ''ಪ್ರವಾಸೋದ್ಯಮ ಸೇರಿದಂತೆ ರಸ್ತೆ, ನೀರಾವರಿ ಹಾಗೂ ಇತರ ಅಭಿವೃದ್ಧಿ ಕೆಲಸ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿರುವುದಕ್ಕೆ ಸಂದ ಜಯವಿದು. ಐದನೇ ಬಾರಿ ಗೆಲುವು ಸಾಧಿಸಿದರೂ ಸಚಿವ ಸ್ಥಾನದ ಆಕಾಂಕ್ಷೆ ಇಲ್ಲ. ಎಲ್ಲ ಮುಖಂಡರು ತೆಗೆದುಕೊಂಡಿರುವ ನಿರ್ಧಾರದಿಂದ ಜಯ ಗಳಿಸಿದ್ದೇನೆ. ಇನ್ನಷ್ಟು ಹೆಚ್ಚಿಗೆ ಕೆಲಸ ಮಾಡುತ್ತೇನೆ'' ಎಂದರು.

ಪರಾಜಿತ ಅಭ್ಯರ್ಥಿ ಸಂಯುಕ್ತ ಪಾಟೀಲ್ ಮಾತನಾಡಿ, ''ಸೋಲು ಮುಖ್ಯವಲ್ಲ. ಲಕ್ಷಾಂತರ ಜನ ಕಾರ್ಯಕರ್ತರು ನನ್ನ ಹಿಂದಿದ್ದಾರೆ ಎಂಬುದು ತಿಳಿಯಿತು. ಮುಂದಿನ ದಿನಗಳಲ್ಲಿ ಕಾರ್ಯಕರ್ತರನ್ನು ಇನ್ನಷ್ಟು ಬಲಿಷ್ಠಗೊಳಿಸಿ, ಅಭಿವೃದ್ಧಿಗೆ ಒತ್ತು ಕೊಡಲಾಗುವುದು'' ಎಂದು ತಿಳಿಸಿದರು.

''ಸೋಲಿಗೆ ಕಾರಣವೇನು ಎಂಬುದು ಈಗಲೇ ತಿಳಿಯುವುದಿಲ್ಲ. ಮುಂದೆ ಎಲ್ಲರೊಡನೆ ಚರ್ಚಿಸಿ, ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಗ್ಯಾರಂಟಿ ಯೋಜನೆ ಸೇರಿದಂತೆ ಇತರ ಅಭಿವೃದ್ಧಿ ವಿಷಯ ಕೈ ಬಿಟ್ಟಿಲ್ಲ. ಕಳೆದ ಬಾರಿಗಿಂತಲೂ ಹೆಚ್ಚಿನ ಕಾರ್ಯಕರ್ತರು ಬೆಂಬಲಿಸಿದ್ದಾರೆ'' ಎಂದು ಹೇಳಿದರು.

ಇದನ್ನೂ ಓದಿ:ಬಾಗಲಕೋಟೆ ಲೋಕಸಭಾ ಕ್ಷೇತ್ರ: ಬಿಜೆಪಿಯ ಪಿ.ಸಿ. ಗದ್ದಿಗೌಡರ ಸತತ ಐದನೇಯ ಬಾರಿ ಗೆಲವು - Lok Sabha Election Results 2024

ABOUT THE AUTHOR

...view details