ಕರ್ನಾಟಕ

karnataka

ETV Bharat / state

FIBAದ ಶಿಸ್ತು ಸಮಿತಿಯಲ್ಲಿ ಸ್ಥಾನ ಪಡೆದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ - Police Commissioner B Dayanand - POLICE COMMISSIONER B DAYANAND

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಮುಂದಿನ ನಾಲ್ಕು ವರ್ಷಗಳ ಅವಧಿಗೆ FIBA ದ ಶಿಸ್ತು ಸಮಿತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

B Dayanand
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ (ETV Bharat)

By ETV Bharat Karnataka Team

Published : May 13, 2024, 10:54 PM IST

ಬೆಂಗಳೂರು :2023-27ರವರೆಗಿನ ಅವಧಿಗೆ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್ (FIBA)ದ ಶಿಸ್ತುಸಮಿತಿಯ ಸದಸ್ಯರ ಪಟ್ಟಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸ್ಥಾನ ಪಡೆದಿದ್ದಾರೆ. ಕರ್ನಾಟಕ ಬಾಸ್ಕೆಟ್‌ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷರೂ ಆಗಿರುವ ಬಿ. ದಯಾನಂದ್, ಮುಂದಿನ ನಾಲ್ಕು ವರ್ಷಗಳ ಅವಧಿಗೆ FIBAದ ಶಿಸ್ತು‌ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಶಿಸ್ತು ಸಮಿತಿಯ ಏಳು ಜನ ಸದಸ್ಯರ ಪೈಕಿ ದಯಾನಂದ್ ಅವರು ಏಕೈಕ ಭಾರತೀಯರಾಗಿದ್ದು, ಜೊತೆಗೆ ಬಲ್ಗೇರಿಯಾದ ಎಲಿಯೊನೋರಾ ರಂಗೆಲೋವಾ, ಸ್ಲೋವಾಕಿಯಾದ ಲುಬೋಮಿರ್ ಕೊಟ್ಲೆಬಾ, ಸ್ವಿಜರ್ಲ್ಯಾಂಡ್‌ನ ಒಲಿವರ್ ಡಕ್ರೆ, ರಾಬರ್ಟ್ ಫಾಕ್ಸ್, ನ್ಯೂಜಿಲೆಂಡ್‌ನ ಕ್ರಿಸ್ ಪ್ಯಾಟರ್ಸನ್, ಸ್ಪೇನ್‌ನ ಬೆಲೆನ್ ಕೊಸೆರೋ ಮೋರಾ ಸಹ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ :ಸೋಷಿಯಲ್ ಮೀಡಿಯಾ ಮೇಲೆ ಕಣ್ಣಿಡಲು ಪ್ರತಿ ಠಾಣಾ ವ್ಯಾಪ್ತಿಯಲ್ಲಿ ನುರಿತ ಸಿಬ್ಬಂದಿ ನಿಯೋಜನೆ!

ABOUT THE AUTHOR

...view details