ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಶಾರದಾಮಠದಲ್ಲಿ ಗಮನ ಸೆಳೆದ ಅಯೋಧ್ಯೆ ರಾಮಮಂದಿರ ಪ್ರತಿಕೃತಿ - ayodhya rammandir

ತುಮಕೂರು ಮೂಲದ ಕಲಾವಿದ ತಯಾರಿಸಿದ ರಾಮಮಂದಿರ ಪ್ರತಿಕೃತಿಯನ್ನು ಶೃಂಗೇರಿ ಶಾರದಾಮಠದಲ್ಲಿ ಪ್ರದರ್ಶನಕ್ಕಿಡಲಾಗಿದೆ.

ayodhya-rammandir-replica-in-sringeri-mutt
ಚಿಕ್ಕಮಗಳೂರು: ಶೃಂಗೇರಿ ಶಾರದಾಮಠದಲ್ಲಿ ಗಮನ ಸೆಳೆದ ಅಯೋಧ್ಯೆ ರಾಮಮಂದಿರ ಪ್ರತಿಕೃತಿ

By ETV Bharat Karnataka Team

Published : Jan 21, 2024, 9:13 PM IST

Updated : Jan 21, 2024, 10:32 PM IST

ಅಯೋಧ್ಯೆ ರಾಮಮಂದಿರ ಪ್ರತಿಕೃತಿ

ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಮತ್ತೊಂದೆಡೆ, ಅಯೋಧ್ಯೆಯಲ್ಲಿರುವ ರಾಮಮಂದಿರದ ಪ್ರತಿಕೃತಿಯನ್ನು ಶೃಂಗೇರಿ ಶಾರದಾಂಬೆಯ ಸನ್ನಿದಿಯಲ್ಲಿ ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿದೆ. ತುಮಕೂರು ಮೂಲದ ವಿನಯ್ ರಾಮ್ ಅವರು ರಾಮಮಂದಿರ ಪ್ರತಿಕೃತಿ ತಯಾರಿಸಿದ್ದಾರೆ. ದೇವಸ್ಥಾನದ ಯಾಗ ಮಂಟಪದಲ್ಲಿ ಪ್ರತಿಕೃತಿಯನ್ನು ಪ್ರದರ್ಶನಕ್ಕೆ ಇಡಲಾಗಲಿದೆ.

ರಾಮಮಂದಿರದ ಕಲಾಕೃತಿಯನ್ನು 55 ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಕಲಾಕೃತಿಯಲ್ಲಿ ರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಕಲಾಕೃತಿ ಪ್ರದರ್ಶನ 2022ರ ಡಿಸೆಂಬರ್ 31 ರಿಂದ ಬೆಂಗಳೂರಿನಿಂದ ಪ್ರಾರಂಭವಾಗಿದೆ. ಇದೀಗ ಶೃಂಗೇರಿ ಮಠಕ್ಕೆ ಆಗಮಿಸಿದ್ದು, ಯಾಗ ಮಂಟಪದಲ್ಲಿ 8 ದಿನಗಳ ಕಾಲ ರಾಮಮಂದಿರದ ಪ್ರತಿಕೃತಿಯನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದಾಗಿದೆ.

ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಕುಟುಂಬಸ್ಥರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ

ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಕುಟುಂಬಸ್ಥರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕುಟುಂಬಸ್ಥರೊಂದಿಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ತಾಯಿ, ಮಗ ಮ್ರಿನಾಲ್ ಹೆಬ್ಬಾಳ್ಕರ್, ಸೊಸೆ ಹಿತಾ ಹೆಬ್ಬಾಳ್ಕರ್, ಮೊಮ್ಮಗಳು ಆಯಿರಾ ಸೇರಿದಂತೆ ಕುಟುಂಬದ 15 ಮಂದಿ ಸದಸ್ಯರ ಜೊತೆ ಹೊರನಾಡು ದೇವಸ್ಥಾನಕ್ಕೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮೊಮ್ಮಗಳು ಆಯಿರಾಗೆ ದೇವಾಲಯದ ಆವರಣದಲ್ಲಿ ಅನ್ನಪ್ರಾಶನ ನೆರವೇರಿಸಲಾಯಿತು.

ಕುಟುಂಬಸ್ಥರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೇವಸ್ಥಾನ ಭೇಟಿ

ಹೊರನಾಡು ದೇವಾಲಯಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಅವರು ಕಳಸ ಪಟ್ಟಣದಲ್ಲಿರುವ ಶಾಸಕಿ ನಯನಾ ಮೋಟಮ್ಮ ಅವರ ಶಾಸಕರ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ಸಂಧರ್ಭದಲ್ಲಿ ಕಳಸ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್, ಕಾಂಗ್ರೆಸ್ ಮುಖಂಡರಾದ ಹಿತ್ತಲಮಕ್ಕಿ ರಾಜೇಂದ್ರ, ಸುಧಾಕರ್, ವೀರೇಂದ್ರ, ಸಂಶುದ್ದೀನ್, ಹೊರನಾಡು ಗ್ರಾಪಂ ಅಧ್ಯಕ್ಷ ಮಧುಕುಮಾರ್ ಮತ್ತಿತರರಿದ್ದರು.

ಇದನ್ನೂ ಓದಿ:ಕುಂದಾನಗರಿ ಕಲಾವಿದನ ಕೈಯಲ್ಲಿ ಅರಳಿದ ರಾಮಮಂದಿರ ಪ್ರತಿಕೃತಿ

Last Updated : Jan 21, 2024, 10:32 PM IST

ABOUT THE AUTHOR

...view details