ಬೆಂಗಳೂರು:ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಆಟೋ ಚಾಲಕನೊಬ್ಬ ಯುವತಿಗೆ ಅವಾಚ್ಯವಾಗಿ ನಿಂದಿಸಿದ್ದ ಘಟನೆ ಸೆಪ್ಟೆಂಬರ್ 2ರಂದು ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಅದೇ ರೀತಿಯ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಜಾಸ್ತಿ ಬಾಡಿಗೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಆಟೋ ಚಾಲಕನೊಬ್ಬ ಯುವತಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ.
ಸಿಲ್ಕ್ ಬೋರ್ಡ್‌ಗೆ ತೆರಳಬೇಕಿದ್ದ ಯುವತಿ ಆಟೋ ಚಾಲಕನ ಬಳಿ ಬಾಡಿಗೆ ಎಷ್ಟು ಎಂದು ಕೇಳಿದ್ದಾರೆ. ಈ ವೇಳೆ ಆಟೋ ಚಾಲಕ ಹೆಚ್ಚು ಬಾಡಿಗೆ ಹೇಳಿದ್ದಾನೆ. ಆದರೆ 150 ರೂಪಾಯಿ ಕೊಡುವುದಾಗಿ ಯುವತಿ ಹೇಳಿದ್ದಾಳೆ. ಸಿಟ್ಟಿಗೆದ್ದ ಆಟೋ ಚಾಲಕ ಅವಾಚ್ಯ ಶಬ್ದಗಳನ್ನು ಬಳಸಿ ಯುವತಿಯನ್ನು ನಿಂದಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.