ಕರ್ನಾಟಕ

karnataka

ETV Bharat / state

ಬೆಂಗಳೂರು: ಯುವತಿಯ ಅತ್ಯಾಚಾರ, ಕೊಲೆ; ಆಟೋ ಚಾಲಕನ ಬಂಧನ - ಬೆಂಗಳೂರು

ಆಟೋ ರಿಕ್ಷಾಗಾಗಿ ಕಾಯುತ್ತಿದ್ದ ಯುವತಿಯನ್ನು ಪಿಕ್ ಮಾಡಿದ್ದ ಚಾಲಕ ಅತ್ಯಾಚಾರವೆಸಗಿ ಆಕೆಯನ್ನು ಕೊಲೆಗೈದ ಘಟನೆ ಸಂಪಂಗಿರಾಮ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.

arrested accused is Mubarak
ಬಂಧಿತ ಆರೋಪಿ ಮುಬಾರಕ್

By ETV Bharat Karnataka Team

Published : Mar 1, 2024, 10:46 PM IST

ಬೆಂಗಳೂರು:ಸಂಪಂಗಿರಾಮ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರ ಸಮೀಪ ಅಪರಿಚಿತ ಯುವತಿಯ ಶವ ಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಆಟೋಗಾಗಿ ಕಾಯುತ್ತಿದ್ದ ಯುವತಿಯನ್ನು ಪಿಕ್ ಮಾಡಿದ್ದ ಆಟೋ ಚಾಲಕ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಪ್ರಕರಣದಲ್ಲಿ ಸುಲ್ತಾನ್ ಪಾಳ್ಯದ ‌ನಿವಾಸಿ ಮುಬಾರಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಿವಾಹಿತನಾಗಿದ್ದ ಮುಬಾರಕ್ ನಾಲ್ಕು ಮಕ್ಕಳ ತಂದೆ. ಹಗಲು ಹೊತ್ತು ಎಳನೀರು ವ್ಯಾಪಾರ ಮಾಡುತ್ತಾ, ರಾತ್ರಿ ಆಟೋ ಓಡಿಸುತ್ತಿದ್ದನು. ಕಳೆದ ಆರು ತಿಂಗಳಿನಿಂದ ಆಟೋ ಓಡಿಸುತ್ತಿದ್ದಾನೆ. ಫೆಬ್ರವರಿ 18ರಂದು ಮಧ್ಯಾಹ್ನ ರಾಯನ್ ಸರ್ಕಲ್ ಬಳಿ ಯುವತಿಯನ್ನು ತನ್ನ ಆಟೋದಲ್ಲಿ ಹತ್ತಿಸಿಕೊಂಡಿದ್ದಾನೆ. ಉರ್ದುವಿನಲ್ಲೇ ಮಾತನಾಡುತ್ತಿದ್ದ ಯುವತಿ ತನ್ನನ್ನು ದರ್ಗಾ ಬಳಿ ಬಿಡುವಂತೆ ಹೇಳಿದ್ದಳು. ಆರೋಪಿ ಕಾಟನ್ ಪೇಟೆ ದರ್ಗಾ ಸಮೀಪ ಬಿಟ್ಟಿದ್ದಾನೆ.‌

ಈ ದರ್ಗಾ ಅಲ್ಲ, ಮತ್ತೊಂದು ದರ್ಗಾ ಎಂದು ಹೇಳಿ ಮಾರ್ಕೆಟ್, ಚಾಮರಾಜಪೇಟೆ ಹಾಗೂ ಸಂಪಗಿರಾಮನಗರದಲ್ಲಿರುವ ದರ್ಗಾಗಳ ಬಳಿ ಡ್ರಾಪ್ ಮಾಡಿದರೂ ತಾನು ಇಳಿಯುವ ಸ್ಥಳ ಇದಲ್ಲ ಎಂದಿದ್ದಳು.‌ ಶಾಂತಿನಗರದ ಸಿಗ್ನಲ್ ಸಮೀಪ ಬರುವಾಗ ಏಕಾಏಕಿ ಆಟೊದಿಂದ ಕೆಳಗಿಳಿದು ಹಣ ನೀಡದೇ ವಂಚಿಸಿದ್ದಳು. ಮಾರನೇ ದಿನ ಇದೇ ಚಾಲಕನಿಗೆ ಮತ್ತೆ ಸಿಕ್ಕಿದ್ದಾಳೆ. ಫೆ.19ರಂದು ರಾತ್ರಿ ಕೆ.ಆರ್.ಮಾರ್ಕೆಟ್ ಸಮೀಪ ಮತ್ತೆ ಆಕೆ ಮುಬಾರಕ್​​ಗೆ ಸಿಕ್ಕಿದ್ದಾಳೆ‌. ದರ್ಗಾದ ಕಡೆ ಹೋಗಬೇಕು ಎಂದಿದ್ದಕ್ಕೆ ಒಲ್ಲೆ ಎಂದಿದ್ದಾನೆ. ಈಕೆಯ ವಂಚನೆ ಬಗ್ಗೆ ಬೇರೆ ಆಟೋ ಚಾಲಕರಿಗೆ ತಿಳಿಸಿದ್ದರಿಂದ ಹತ್ತಿಸಿಕೊಳ್ಳಲು ಹಿಂಜರಿದಿದ್ದರು. ಕೆಲ ಹೊತ್ತಿನ ಬಳಿಕ ಆರೋಪಿಯೇ‌ ಆಕೆಯನ್ನು ಪಿಕ್‌ ಮಾಡಿಕೊಂಡಿದ್ದಾನೆ.‌

ರಾತ್ರಿ 11.30ರಿಂದ ಬೆಳಗಿನ ಜಾವ 3 ಗಂಟೆವರೆಗೆ ಆಟೋದಲ್ಲಿ ಯುವತಿಯನ್ನ‌ು ಕೂರಿಸಿ ಸುತ್ತಾಡಿಸಿದ್ದನು. ನಿದ್ರೆ ಮಂಪರಿನಲ್ಲಿದ್ದ ಯುವತಿಯನ್ನು ಶಾಂತಿನಗರದ ಡಬಲ್ ರೋಡ್‌ನ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆತಂದಿದ್ದನು. ಆಕೆಯನ್ನು ಎತ್ತಿಕೊಂಡು ಹೋಗಿ ಕಟ್ಟಡದ ಮೊದಲ ಮಹಡಿಯಲ್ಲಿ ಅತ್ಯಾಚಾರವೆಸಗಿದ್ದಾನೆ‌.‌ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಕ್ಕಾಗಿ ಆತಂಕಗೊಂಡು ಮೊದಲ ಮಹಡಿಯಿಂದ ತಳ್ಳಿ ಸಾಯಿಸಿದ್ದಾನೆ ಎಂದು ಸಂಪಂಗಿರಾಮ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಚಾಮರಾಜನಗರ: ಬಸ್ ಪಲ್ಟಿ, 30 ಮಂದಿ ಕಾರ್ಮಿಕರಿಗೆ ಗಾಯ

ABOUT THE AUTHOR

...view details