ದಾವಣಗೆರೆ:ಯುವಕನನ್ನು ಕೋಣೆಯಲ್ಲಿ ಕೂಡಿ ಹಾಕಿ ಏಳು ಮಂದಿ ಮನಬಂದಂತೆ ಥಳಿಸಿರುವ ಘಟನೆ ಜಿಲ್ಲೆಯ ಹರಿಹರ ನಗರದ ಬೆಂಕಿ ನಗರದಲ್ಲಿ ಮೇ 31ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹರಿಹರ ನಗರ ಠಾಣೆಯ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮೊಹಮ್ಮದ್ ಆಲಿ ಅಲಿಯಾಸ್ ಮೊಹಮ್ಮದ್ ಅಝ್ಗರ್ (26) ಹಲ್ಲೆಗೊಳಗಾದ ಯುವಕ. ಈತ ಹರಿಹರ ನಗರದ ಕಾಳಿದಾಸ ನಗರ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.