ಬೆಂಗಳೂರು: ನಗರದಲ್ಲಿರುವ ಏಷ್ಯಾದ ಅತೀ ದೊಡ್ಡ ಸೈನ್ಸ್ ಗ್ಯಾಲರಿ ಕಾರ್ಬನ್ ಮಾಡೆಲ್‌ಗಳು, ಕುತೂಹಲ ಮೂಡಿಸುವ ಸಂಶೋಧನೆಗೆ ಪ್ರಚೋದಿಸುವ ವಿಚಾರಗಳನ್ನು ಒಳಗೊಂಡಿವೆ. ಇವು ಸಾರ್ವಜನಿಕರನ್ನು ವಿಜ್ಞಾನದೆಡೆಗೆ ಸೆಳೆಯುತ್ತಿದೆ. ಒಂದು ತಿಂಗಳ ಹಿಂದೆ ಸೈನ್ಸ್ ಗ್ಯಾಲರಿಯನ್ನು ರಾಜ್ಯ ಸರ್ಕಾರ ಹಾಗೂ ಇಂಟರ್‌ನ್ಯಾಷನಲ್ ಸೈನ್ಸ್ ಗ್ಯಾಲರಿಯನ್ನು ಸಂಜಯನಗರದಲ್ಲಿ ತೆರೆಯಲಾಗಿತ್ತು. ಈಗ ವಿಜ್ಞಾನದ ಲೋಕವನ್ನು ಆಸ್ವಾದಿಸಲು ವಿದ್ಯಾರ್ಥಿಗಳು, ಸಾರ್ವಜನಿಕರು ಸಾಗರೋಪಾದಿಯಲ್ಲಿ ಗ್ಯಾಲರಿಯತ್ತ ಧಾವಿಸುತ್ತಿದ್ದಾರೆ.
1 ಲಕ್ಷ ಚದರಡಿ ವಿಸ್ತೀರ್ಣದಲ್ಲಿ 102 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಬಹುಮಹಡಿ ಕಟ್ಟಡ ಇದಾಗಿದೆ. ರಾಜ್ಯ ಸರ್ಕಾರದಿಂದ 51 ಕೋಟಿ ರೂ ಹಣವನ್ನು ಸೈನ್ಸ್ ಗ್ಯಾಲರಿಗೆ ನೀಡಲಾಗಿದೆ. ತಳ ಹಾಗೂ ಮೊದಲ ಮಹಡಿಯಲ್ಲಿ ವಿಜ್ಞಾನದ ಮಾಡೆಲ್ಗಳನ್ನು ಪ್ರದರ್ಶಿಸಲಾಗುತ್ತಿದೆ.
ಗ್ಯಾಲರಿಯೊಳಗೆ ಪ್ರವೇಶಿಸಿದ ತಕ್ಷಣ ಅಂತಾರಾಷ್ಟ್ರೀಯ ಕಲಾವಿದ ಅನೈಸ್ ತೊಂಡೂರು ರಚಿಸಿದ ಚಿತ್ರ ಕಾಣಸಿಗುತ್ತದೆ. ಅದನ್ನು ನಗರಗಳಲ್ಲಿ ಮುಖಕ್ಕೆ ಬಳಕೆ ಮಾಡಿದ ಮಾಸ್ಕ್‌ಗಳಿಂದ ಸಂಗ್ರಹವಾದ ಕಾರ್ಬನ್ ಕಪ್ಪು ಕಣಗಳನ್ನು ಬಳಸಿಕೊಂಡು ಮುದ್ರಿಸಿರುವುದು ವಿಶೇಷ.
ಮುಖ್ಯವಾಗಿ, ಇಲ್ಲಿರುವ ಕಾರ್ಬನ್ ವರ್ಚುವಲ್ ಎಫೆಕ್ಟ್ನಲ್ಲಿ ಸಣ್ಣಗಿರುವ ಕಾರ್ಬನ್ ಕಣಗಳನ್ನು ಬಹಳ ಹತ್ತಿರದಿಂದ ಜನರು ವೀಕ್ಷಿಸುತ್ತಿದ್ದಾರೆ. ಇದರಲ್ಲಿ ಕಾರ್ಬನ್ ನ್ಯಾನೊ ಲೋಕದಲ್ಲಿ ಸಂಚರಿಸುವ ಅನುಭವ ಸಿಗುತ್ತಿದೆ. ಅದೇ ಸಮಯದಲ್ಲಿ ಬರುವ ಕಾರ್ಬನ್ ಕಣಗಳ ಚಲನೆಯ ಸೌಂಡ್ ಬಾಹ್ಯಕಾಶದಲ್ಲಿನ ಅನುಭವ ನೀಡುತ್ತಿವೆ.