ಮೈಸೂರು: ಮಾಜಿ ಪ್ರಧಾನಿ ಹಾಗೂ ದೇಶದ ಶ್ರೇಷ್ಠ ಆರ್ಥಿಕ ತಜ್ಞ ದಿವಂಗತ ಡಾ.ಮನಮೋಹನ್ ಸಿಂಗ್ ಅವರಿಗೆ ಮೈಸೂರಿನ ಕಲಾವಿದ ನಂಜುಂಡಸ್ವಾಮಿ ಅವರು ಕೃಷ್ಣಕಲೆಯ ಮೂಲಕ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ದೇಶದ ಅರ್ಥವ್ಯವಸ್ಥೆಯ ಪ್ರಗತಿಗೆ ಹಲವು ಕೊಡುಗೆಗಳನ್ನು ನೀಡಿರುವ ಡಾ.ಸಿಂಗ್ ವ್ಯಕ್ತಿತ್ವವನ್ನು ಪೆನ್ಸಿಲ್‌ನಲ್ಲಿ ಕೃಷ್ಣ ಕಲೆಯ ಮೂಲಕ ಆಕರ್ಷಕವಾಗಿ ಬಿಡಿಸಿದ್ದಾರೆ.
ಕಲಾವಿದ ನಂಜುಂಡಸ್ವಾಮಿ ಮಾತನಾಡಿ, "ನನ್ನ ಕಲೆಗೆ ಕೃಷ್ಣ ಕಲೆ ಎಂದು ಟೈಟಲ್ ಕೊಟ್ಟಿದ್ದೇನೆ. ಸುಮಾರು 11 ವರ್ಷಗಳಿಂದ ಈ ಕಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿಯವರೆಗೆ 800-1000ಕ್ಕೂ ಹೆಚ್ಚು ಪ್ರಸಿದ್ದ ವ್ಯಕ್ತಿಗಳನ್ನು ಕೃಷ್ಣ ಕಲೆಯ ಮೂಲಕ ರಚಿಸಿದ್ದೇನೆ" ಎಂದರು.