ಕರ್ನಾಟಕ

karnataka

ETV Bharat / state

₹3 ಕೋಟಿಗೆ ನಕಲಿ ಡೈಮಂಡ್ ಹರಳುಗಳ ಮಾರಾಟ ಯತ್ನ; ನಾಲ್ವರು ಸೆರೆ - Fake Diamond Crystals Case

ಕೋಟ್ಯಂತರ ಬೆಲೆಗೆ ನಕಲಿ ಡೈಮಂಡ್ ಹರಳುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

By ETV Bharat Karnataka Team

Published : Mar 18, 2024, 2:23 PM IST

ದೇವನಹಳ್ಳಿ:ವಾಟ್ಸ್‌ಆ್ಯಪ್ ಕಾಲ್ ಮೂಲಕ ಡೈಮಂಡ್ ವ್ಯಾಪಾರ ಕುದುರಿಸಿ 10 ಕೋಟಿ ಮೌಲ್ಯದ ಡೈಮಂಡ್​ಗಳನ್ನು 3 ಕೋಟಿಗೆ ಕೊಡುವುದಾಗಿ ಹೇಳಿ, ನಕಲಿ ಡೈಮಂಡ್ ಮಾರಾಟಕ್ಕೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಕೆಂಪೇಗೌಡ ಅಂತಾರಾಷ್ಚ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮೀನಾರಾಯಣ ಎಂಬವರಿಗೆ ನಕಲಿ ಡೈಮಂಡ್ ಹರಳುಗಳನ್ನು ಮಾರಾಟ ಮಾಡಿ 3 ಕೋಟಿ ಹಣ ಲಪಟಾಯಿಸಲು ಯತ್ನಿಸಿದ ರವಿ, ನವೀನ್ ಕುಮಾರ್, ಗೂರ್ ಅಹಮದ್, ಅಬ್ಧುಲ್ ದಸ್ತಗಿರ್ ಬಂಧಿತರು. ಮಾರ್ಚ್ 14ರಂದು ಆರೋಪಿ ರವಿ, ಲಕ್ಷ್ಮೀನಾರಾಯಣ ಎಂಬವರಿಗೆ ವಾಟ್ಸ್‌ಆ್ಯಪ್ ಕಾಲ್ ಮಾಡಿ ಡೈಮಂಡ್ ವ್ಯವಹಾರದ ಮಾತನಾಡಲು ಏರ್ಪೋರ್ಟ್​ನ ತಾಜ್ ಹೋಟೆಲ್​​ಗೆ ಬನ್ನಿ ಎಂದಿದ್ದ. ಅದರಂತೆ ಲಕ್ಷ್ಮೀನಾರಾಯಣ ಸ್ನೇಹಿತರನ್ನು ಕರೆದುಕೊಂಡು ಹೋಟೆಲ್​​ಗೆ ಹೋಗಿದ್ದರು. ಅವರ ಮುಂದೆ ಎರಡು ಬಾಕ್ಸ್​​ಗಳಲ್ಲಿದ್ದ ಡೈಮಂಡ್ ಹರಳುಗಳನ್ನು ತೆಗೆದು, ಮಷಿನ್​ನಲ್ಲಿ ಪರೀಕ್ಷಿಸಿದ್ದಾರೆ.

ಇವುಗಳು ಅಸಲಿ ಡೈಮಂಡ್​​​ಗಳಾಗಿದ್ದು, ಮಾರುಕಟ್ಟೆಯಲ್ಲಿ ಇವುಗಳ ಅಸಲಿ ಬೆಲೆ 10 ಕೋಟಿ ಇದ್ದು, ನಾವು 3 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಲಕ್ಷ್ಮೀನಾರಾಯಣ ಖುದ್ದು ಹರಳುಗನ್ನು ಪರೀಕ್ಷಿಸಿದ್ದಾಗ ನಕಲಿ ಡೈಮಂಡ್​​ಗಳೆಂಬ ಅನುಮಾನ ಬಂದಿದೆ. ತಕ್ಷಣವೇ ಅವರು ನಕಲಿ ಡೈಮಂಡ್ ತೋರಿಸಿ ಹಣ ಲಪಟಾಯಿಸಲು ಯತ್ನಸಿದ ಈ ನಾಲ್ವರ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಅಂಗಡಿ ಮಾಲೀಕರೇ ಹುಷಾರ್! ಬೆಂಗಳೂರಲ್ಲಿ ಯುಪಿಐ ನಕಲಿ ಪೇಮೆಂಟ್ ತೋರಿಸಿ ವಂಚಿಸಿದ್ದ ಜೋಡಿ ಅರೆಸ್ಟ್

ABOUT THE AUTHOR

...view details