ಕರ್ನಾಟಕ

karnataka

ETV Bharat / state

ಕಾಲೇಜು ಗಲಾಟೆಯ ಜಿದ್ದಿಗೆ ಸಹಪಾಠಿಗಳ ಮೇಲೆ ರಾಡ್​ನಿಂದ ಹಲ್ಲೆ: ಏಳು ಜನ ಆರೋಪಿಗಳ ಬಂಧನ - BENGALURU CRIME NEWS

ಸಹಪಾಠಿಗಳ ಮೇಲೆ ರಾಡ್​ನಿಂದ ಹಲ್ಲೆ ಮಾಡಿ, ಹಣ ವಸೂಲಿ ಮಾಡಿದ 7 ಆರೋಪಿಗಳನ್ನು ಯಲಹಂಕ ನ್ಯೂಟೌನ್ ಠಾಣಾ ಪೊಲೀಸರು ಬಂಧಿಸಿದ್ದಾರೆ‌.

ಆರೋಪಿಗಳ ಬಂಧನ
ಆರೋಪಿಗಳ ಬಂಧನ

By ETV Bharat Karnataka Team

Published : Apr 24, 2024, 12:20 PM IST

Updated : Apr 24, 2024, 1:52 PM IST

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್

ಬೆಂಗಳೂರು:ಕಾಲೇಜಿನಲ್ಲಿ ನಡೆದ ಗಲಾಟೆಯ ಜಿದ್ದಿಗೆ ಸಹಪಾಠಿಗಳನ್ನು ಕೂಡಿ ಹಾಕಿ ಹಲ್ಲೆ ಮಾಡಿ ಹಣ ಸುಲಿಗೆ ಮಾಡಿದ್ದ ಏಳು ಜನ ಆರೋಪಿಗಳನ್ನು ಯಲಹಂಕ ನ್ಯೂಟೌನ್ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಕೃಷ್ಣ ಬಾಜಪೇಯಿ ಹಾಗೂ ಯುವರಾಜ್ ಸಿಂಗ್​ ಎಂಬಾತನ ಮೇಲೆ ಹಲ್ಲೆ ಮಾಡಿ ಹಣ ಸುಲಿಗೆ ಮಾಡಿದ್ದ ವಿವೇಕ್, ಅನಾಮಿತ್ರ, ಯುವರಾಜ್ ರಾಥೋಡ್, ಅರಿಜ್ರೋಜೀತ್, ಪ್ರಜೀತ್, ಆ್ಯಲೆನ್ ಹಾಗೂ ಕರಣ್ ಎಂಬುವರನ್ನು ಬಂಧಿಸಲಾಗಿದೆ.

ಪ್ರಕರಣದ ಬಗ್ಗೆ ಪೊಲೀಸರ ವಿವರಣೆ: "ಹಲ್ಲೆಗೊಳಗಾದ ಕೃಷ್ಣ ಬಾಜಪೇಯಿ, ಯುವರಾಜ್​ ಸಿಂಗ್ ರಾಜಾನುಕುಂಟೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು. ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಆರೋಪಿಗಳ ಗುಂಪಿನೊಂದಿಗೆ 15 ದಿನಗಳ ಹಿಂದಷ್ಟೆ ಗಲಾಟೆ ಮಾಡಿಕೊಂಡಿದ್ದರು. ಆ ಗಲಾಟೆಯಲ್ಲಿ ಆರೋಪಿ ಅನಾಮಿತ್ರನ ತಲೆಗೆ ಗಾಯವಾಗಿತ್ತು. ಅದೇ ಜಿದ್ದಿಗೆ ಕೃಷ್ಣ ಬಾಜಪೇಯಿ ಹಾಗೂ ಯುವರಾಜ್ ಸಿಂಗ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಆರೋಪಿಗಳು ಕಾಯುತ್ತಿದ್ದರು".

"ಈ ಸಂದರ್ಭ ಯಲಹಂಕ ನ್ಯೂಟೌನ್‌ನ ಅನಂತಪುರ ಬಳಿಯ ಕ್ಯಾಲಿಫೋರ್ನಿಯಾ ರೆಸಾರ್ಟ್​ ಬಳಿ ಸಂತ್ರಸ್ತ ಯುವಕರು ಮನೆ ಹುಡುಕುತ್ತಿದ್ದರು. ಇದೇ ವೇಳೆ ಆರೋಪಿಗಳು ಇಬ್ಬರನ್ನು ಕೂಡಿ ಹಾಕಿ ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿ, ಸಿಗರೇಟಿನಿಂದ ಸುಟ್ಟಿದ್ದರು. ಬಳಿಕ ಅವರ ಕೈಯಲ್ಲಿದ್ದ ಮಾದಕ ಪದಾರ್ಥ ಇಟ್ಟು ವಿಡಿಯೋ ಚಿತ್ರೀಕರಿಸಿಕೊಂಡು ಸುಮಾರು 50 ಸಾವಿರ ಹಣ ವಸೂಲಿ ಮಾಡಿದ್ದರು. ನಂತರ 4 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆಯಿಟ್ಟು ಬಿಟ್ಟು ಕಳಿಸಿದ್ದರು".

"ಘಟನೆಯ ಬಳಿಕ ಗಾಯಾಳುಗಳು ಯಲಹಂಕ ನ್ಯೂಟೌನ್​ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ" ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ:ಬೈಕ್​ಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದು ಇಬ್ಬರ ಸಾವು: ಬೆಂಕಿ ಕೆನ್ನಾಲಿಗೆಗೆ ಬಸ್​​ ಸುಟ್ಟು ಕರಕಲು - Hassan accident

Last Updated : Apr 24, 2024, 1:52 PM IST

ABOUT THE AUTHOR

...view details