ಕರ್ನಾಟಕ

karnataka

ETV Bharat / state

ಭವಿಷ್ಯದ ಭಾರತಕ್ಕಾಗಿ ಮೋದಿಯನ್ನು ಗೆಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ: ಸಂಸದ ಪ್ರತಾಪ್ ಸಿಂಹ - mp pratap simha - MP PRATAP SIMHA

ಸಾಮಾನ್ಯ ಕಾರ್ಯಕರ್ತನೂ ಲೋಕಸಭಾ ಸದಸ್ಯನಾಗಬಲ್ಲ ಮಾಡಬಲ್ಲ ಏಕೈಕ ಪಕ್ಷ ಬಿಜೆಪಿ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

all-efforts-should-be-made-to-win-over-modi-for-future-india-says-mp-pratap-simha
ಭವಿಷ್ಯದ ಭಾರತಕ್ಕಾಗಿ ಮೋದಿಯವರನ್ನು ಗೆಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು: ಸಂಸದ ಪ್ರತಾಪ್ ಸಿಂಹ

By ETV Bharat Karnataka Team

Published : Apr 2, 2024, 11:00 PM IST

ಪುತ್ತೂರು(ದಕ್ಷಿಣ ಕನ್ನಡ):ಭಾರತವನ್ನು ಜಗತ್ತಿಗೇ ನಾಯಕತ್ವ ಸ್ಥಾನದಲ್ಲಿ ನಿಲ್ಲಿಸಿರುವ ನರೇಂದ್ರ ಮೋದಿಯವರ ವಿಚಾರದಲ್ಲಿ ಮೈಮರೆವು ಬೇಡ. ನಮ್ಮ ಗುರಿ, ಉದ್ದೇಶ, ಸಂಕಲ್ಪ, ಶ್ರಮ ಮೋದಿಯವರನ್ನು ಮತ್ತಷ್ಟು ವರ್ಷಗಳ ಕಾಲ ಪ್ರಧಾನಿಯಾಗಿಸುವುದೇ ಆಗಿರಬೇಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ. ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಾದ್ಯಂತ ಬಿಜೆಪಿಗೆ ಒಳ್ಳೆಯ ವಾತಾವರಣವಿದೆ. 1998 ರಲ್ಲಿ ಪರಮಾಣು ಪರೀಕ್ಷೆ ಮಾಡಿದ, ಸರ್ವಶಿಕ್ಷಣ, ಗ್ರಾಮೀಣ ಸಡಕ್ ರಸ್ತೆಗಳು, ಅನ್ನಭಾಗ್ಯ, ಅಂತ್ಯೋದಯ ಯೋಜನೆ ಸೇರಿದಂತೆ ಭಾರತವನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸಿದ ವಾಜಪೇಯಿ ವಿಚಾರದಲ್ಲಿ ನಾವು ತಪ್ಪು ಮಾಡಿದ್ದೇವೆ. ಭವಿಷ್ಯದ ಭಾರತಕ್ಕಾಗಿ ನರೇಂದ್ರ ಮೋದಿಯವರನ್ನು ಗೆಲ್ಲಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಾವು ಮಾಡಲೇ ಬೇಕು ಎಂದರು.

ಸಂಸದ ಪ್ರತಾಪ್ ಸಿಂಹ

ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ಹಾಗೂ ದ.ಕ. ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಸ್ವಾಮಿ ವಿವೇಕಾನಂದ ಕಂಡ ಭಾರತದ ಕನಸು ಈಗ ನನಸಾಗುತ್ತಿದೆ. ಈ ಹಿಂದೆ ಎನ್‌ಡಿಎ, ಯುಪಿಎಗಳು ಎಷ್ಟು ಸ್ಥಾನಗಳನ್ನು ಪಡೆಯುತ್ತವೆ ಎಂಬ ವಿಚಾರಗಳೇ ಲೋಕಸಭಾ ಚುನಾವಣೆ ಸಂದರ್ಭದ ಪ್ರಮುಖ ಚರ್ಚೆಯಾಗುತ್ತಿದ್ದರೆ ಇಂದು ಮುಂದಿನ ಬಾರಿ ಮತ್ತೆ ಮೋದಿ ಪ್ರಧಾನಿ ಎಂಬುದೇ ಪ್ರಮುಖ ವಿಚಾರವಾಗಿದೆ. ಸಾಮಾನ್ಯ ಕಾರ್ಯಕರ್ತನೂ ಲೋಕಸಭಾ ಸದಸ್ಯನಾಗಬಲ್ಲ ಮಾಡಬಲ್ಲ ಏಕೈಕ ಪಕ್ಷ ಬಿಜೆಪಿ ಎಂದು ಹೇಳಿದರು.

ನಾವು ಸಂಘದ ಸ್ವಯಂ ಸೇವಕರು. ಪ್ರಚಾರಕ್ಕಿಂತ ವಿಚಾರಕ್ಕೆ ಆದ್ಯತೆ ನೀಡಿದವರು. ಸಂಘದ ಸಿದ್ಧಾಂತದಿಂದ ಬಂದು ಭಾರತದ ಪರಮ ವೈಭವಕ್ಕಾಗಿ ಕೆಲಸ ಮಾಡುವ ಸಿದ್ಧಾಂತಕ್ಕೆ ಬದ್ಧರಾದವರು. ಆ ಆಶಯ ಇಂದು ಈಡೇರುತ್ತಿದೆ ಎಂದು ಹೇಳಿದ ನಳಿನ್, 15 ವರ್ಷದ ಸಂಸತ್ ಸದಸ್ಯನ ಅವಕಾಶ ಖುಷಿ ನೀಡಿದೆ. ಅಪೂರ್ವ ಅಭಿವೃದ್ಧಿಗೆ ಪ್ರಧಾನಿ ಮೋದಿಯವರು ಬೆಂಬಲ ನೀಡಿದ್ದು, ಜಿಲ್ಲೆಗೆ ಬಂದ ಅನುದಾನಗಳ ಅಂಕಿ ಸಂಖ್ಯೆಗಳ ಜತೆಗೆ ಜಾರಿಗೊಂಡಿರುವ ಯೋಜನೆಗಳೇ ಸಾಕ್ಷಿಯಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಿಜೆಪಿ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಸಹ ಸಂಚಾಲಕ ಗೋಪಾಲಕೃಷ್ಣ ಹೇರಳೆ, ಪಕ್ಷದ ಪ್ರಮುಖರು ಸೇರಿದಂತೆ ಇತತರು ಉಪಸ್ಥಿತರಿದ್ದರು.

ಇದನ್ನೂ ಓದಿ:ನಾಳೆನೇ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ರೆ ನಾನು ಚುನಾವಣೆಗೆ ನಿಲ್ಲುವುದಿಲ್ಲ: ಕೆ ಎಸ್​ ಈಶ್ವರಪ್ಪ - KS ESHWARAPPA

ABOUT THE AUTHOR

...view details