ಬೆಂಗಳೂರು:ಪ್ರಯಾಣಿಕರ ಅನುಕೂಲಕ್ಕಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಹೊಸ ಮಾರ್ಗವನ್ನು ಆರಂಭಿಸಿದೆ. ಬೆಂಗಳೂರಿನಿಂದ ಲಂಡನ್ ಹೀಥ್ರೂಗೆ ನೇರ ವಿಮಾನವನ್ನು ಅಕ್ಟೋಬರ್ 27 ರಿಂದ ದೈನಂದಿನ ಸೇವೆಯನ್ನು ಘೋಷಿಸಿದೆ.
ಬೆಂಗಳೂರಿನಿಂದ ಲಂಡನ್ನ ಹೀಥ್ರೂಗೆ ಅತಿಹೆಚ್ಚು ಜನರು ಪ್ರಯಾಣ ಬೆಳೆಸಲಿದ್ದು, ಅವರಿಗೆ ಹೆಚ್ಚು ಅನುಕೂಲವಾಗಲಿದೆ. ಬೆಂಗಳೂರಿನಿಂದ ಲಂಡನ್ನ ಗ್ಯಾಟ್ವಿಕ್‌ಗೆ ತೆರಳಿ ಅಲ್ಲಿಂದ ಹೀಥ್ರೂಗೆ ಪ್ರಯಾಣಿಸಲಿದೆ ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.
ಬೆಂಗಳೂರು-ಲಂಡನ್ ಮಾರ್ಗದಲ್ಲಿನ ವಿಮಾನವನ್ನು ವಾರಕ್ಕೆ ಐದು ಬಾರಿ ದೈನಂದಿನ ಪ್ರಯಾಣವಿರಲಿದೆ. ಬೋಯಿಂಗ್ 787-8 ಡ್ರೀಮ್‌ಲೈನರ್ ಏರ್‌ಕ್ರಾಫ್ಟ್ ವಿಮಾನ ಸೇವೆ ಇದಾಗಿದೆ. ಬುಸಿನೆಸ್ ಕ್ಲಾಸ್ನಲ್ಲಿ 18 ಫ್ಲಾಟ್ ಬೆಡ್‌ಗಳು ಮತ್ತು 238 ಎಕಾನಮಿ ಸೀಟ್‌ಗಳನ್ನು ವಿಮಾನ ಹೊಂದಿದೆ. ಎರಡು ನಗರಗಳ ನಡುವೆ ವಾರಕ್ಕೆ ಒಟ್ಟು 3,584 ಜನರನ್ನು ಹೊತ್ತೊಯ್ಯಬಹುದು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಏರ್ ಇಂಡಿಯಾ ಈಗಾಗಲೇ ದೆಹಲಿ ಮತ್ತು ಮುಂಬೈನಿಂದ ಲಂಡನ್ನ ಹೀಥ್ರೂಗೆ ವಾರಕ್ಕೊಮ್ಮೆ ವಿಮಾನಗಳನ್ನು ನಿರ್ವಹಿಸುತ್ತಿದೆ. ಈ ಹಾದಿಯಲ್ಲಿ ಬೆಂಗಳೂರನ್ನು ಸೇರಿಸುವುದರಿಂದ ಏರ್ ಇಂಡಿಯಾದ ಎಲ್ಲಾ ಮೂರು ಪ್ರಮುಖ ಕೇಂದ್ರಗಳನ್ನು ಈ ಪ್ರಮುಖ ಗಮ್ಯಸ್ಥಾನಕ್ಕೆ ಸಂಪರ್ಕಿಸುತ್ತದೆ. ಈ ಬದಲಾವಣೆಯ ಹೊರತಾಗಿಯೂ, ಏರ್ ಇಂಡಿಯಾ ಅಹಮದಾಬಾದ್, ಅಮೃತಸರ, ಗೋವಾ ಮತ್ತು ಕೊಚ್ಚಿಯಿಂದ ಲಂಡನ್ ಗ್ಯಾಟ್ವಿಕ್‌ಗೆ ಒಟ್ಟು 12 ಸಾಪ್ತಾಹಿಕ ಸೇವೆಗಳೊಂದಿಗೆ ವಿಮಾನ ಸೇವೆ ನೀಡುವುದನ್ನು ಮುಂದುವರಿಸುತ್ತದೆ.
ಬೆಂಗಳೂರು-ಹೀಥ್ರೂ ವೇಳಾಪಟ್ಟಿಯ ಪ್ರಕಾರ, ಫ್ಲೈಟ್ AI133 ಬೆಂಗಳೂರಿನಿಂದ ಸ್ಥಳೀಯ ಸಮಯ ಮಾಧ್ಯಾಹ್ನ 2.20 ಕ್ಕೆ ಹೊರಡುತ್ತದೆ. ಲಂಡನ್ ಹೀಥ್ರೂಗೆ 7.30 ನಿಮಿಷಕ್ಕೆ ತಲುಪುತ್ತದೆ. ಹಿಂದಿರುಗುವ AI132 ವಿಮಾನವು ಲಂಡನ್ ಹೀಥ್ರೂನಿಂದ 11.05 ಕ್ಕೆ ಹೊರಟು ಮರುದಿನ ಮಧ್ಯಾಹ್ನ 12:20 ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ ಎಂದು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.
ಏರ್ ಇಂಡಿಯಾದ ಅಧಿಕೃತ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ಹೊಸ ವಿಮಾನಗಳಿಗಾಗಿ ಬುಕಿಂಗ್‌ಗಳನ್ನು ಈಗಾಗಲೇ ಆರಂಭಿಸಲಾಗಿದೆ. ಈ ಹೊಸ ಮಾರ್ಗವು ತನ್ನ ಐದು ವರ್ಷಗಳ ರೂಪಾಂತರ ಯೋಜನೆಯಡಿ ಏರ್ ಇಂಡಿಯಾದ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿದೆ.
ಇದನ್ನೂ ಓದಿ:ಬಿಕ್ಕಟ್ಟಿನ ನಡುವೆ ಪಾಕಿಸ್ತಾನದ ಯುವತಿ ಜೊತೆ ಬಿಜೆಪಿ ಲೀಡರ್ ಪುತ್ರನ 'ವರ್ಚುವಲ್ ಮ್ಯಾರೇಜ್'