ಬೆಂಗಳೂರು:"ದರ್ಶನ್ ಸರ್ ಆರೋಗ್ಯವಾಗಿದ್ದಾರೆ. ಜೈಲಿನಲ್ಲಿ ಅವರನ್ನು ನೋಡಲು ಕಷ್ಟವಾಗುತ್ತಿದೆ. ಎಲ್ಲ ನಟ ಹಾಗೂ ನಟಿಯರು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಾವೆಲ್ಲರೂ ನಿಮ್ಮ ಬರುವಿಕೆಗಾಗಿ ಕಾಯುತ್ತಿದ್ದೇವೆ ಎಂದೆ. ಅದಕ್ಕವರು, ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಆದಷ್ಟು ಬೇಗ ಹೊರ ಬರುತ್ತೇನೆ" ಎಂದು ಹೇಳಿರುವುದಾಗಿ ನಟಿ ರಚಿತಾ ರಾಮ್ ತಿಳಿಸಿದ್ದಾರೆ.
ಇಂದು ನಗರದ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿಯಾಗಿ ಧೈರ್ಯ ತುಂಬಿದ ರಚಿತಾ ರಾಮ್, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
"ರಾಜನನ್ನು ರಾಜನ ಥರಾನೇ ನನಗೆ ನೋಡೋಕೆ ಇಷ್ಟ. ಇಂದು ಅವರನ್ನು ನೋಡಿ ನಿರಾಳತೆ ಉಂಟಾಯಿತು" ಎಂದು ಅವರು ಭಾವುಕರಾದರು.