ಕರ್ನಾಟಕ

karnataka

ETV Bharat / state

ಬೆಣ್ಣೆನಗರಿಗೆ ಹ್ಯಾಟ್ರಿಕ್​​ ಹಿರೋ ಶಿವರಾಜ್​ ಕುಮಾರ್, ಯೋಗರಾಜ್​ ಭಟ್​ ಭೇಟಿ​ - Shivraj Kumar visited davangere

ಕರಟಕ ದಮನಕ ಚಿತ್ರದ ನಟ ಶಿವರಾಜ್​ ಕುಮಾರ್​ ಹಾಗೂ ನಿರ್ದೇಶಕ ಯೋಗರಾಜ್​ ಭಟ್ ದಾವಣಗೆರೆಗೆ ಭೇಟಿ ನೀಡಿದ್ದಾರೆ.

ಬೆಣ್ಣೆನಗರಿಗೆ ಹ್ಯಾಟ್ರೀಕ್ ಹಿರೋ ಶಿವರಾಜ್​ ಕುಮಾರ್, ಯೋಗರಾಜ್​ ಭಟ್​ ಭೇಟಿ​
ಬೆಣ್ಣೆನಗರಿಗೆ ಹ್ಯಾಟ್ರೀಕ್ ಹಿರೋ ಶಿವರಾಜ್​ ಕುಮಾರ್, ಯೋಗರಾಜ್​ ಭಟ್​ ಭೇಟಿ​

By ETV Bharat Karnataka Team

Published : Mar 11, 2024, 8:23 PM IST

ದಾವಣಗೆರೆ: ಹ್ಯಾಟ್ರಿಕ್ ಹಿರೋ ಡಾ.ಶಿವರಾಜ್ ಕುಮಾರ್ ಹಾಗೂ ಭಾರತದ ಮೈಕಲ್​​​​​​​ ಜಾಕ್ಸನ್ ಎಂದೇ ಖ್ಯಾತಿ ಪಡೆದಿರುವ ಪ್ರಭುದೇವ ಅವರ ಕಾಂಬಿನೇಷನ್​ನಲ್ಲಿ ಮೂಡಿ ಬಂದ ಚಿತ್ರ ಕರಟಕ ದಮನಕ. ಈ ಚಿತ್ರಕ್ಕೆ ನಿರ್ದೇಶಕ ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳಿದ್ದಾರೆ‌. ಶಿವರಾಜ್‌ಕುಮಾರ್, ಪ್ರಭುದೇವ, ಯೋಗರಾಜ್ ಭಟ್, ರಾಕ್‌ಲೈನ್ ವೆಂಕಟೇಶ್ - ಈ ನಾಲ್ವರ ಸೇರಿ ಮಾಡಿರುವ ಕರಟಕ ದಮನಕ ಸಿನಿಮಾ ಬೆಳ್ಳಿ ಪರದೆ ಮೇಲೆ ಅಬ್ಬರಿಸುತ್ತಿದೆ.

ಚಿತ್ರದಲ್ಲಿ ನೀರಿನ ಸಮಸ್ಯೆ ಮತ್ತು ಬಳಕೆಯ ಬಗ್ಗೆ ಸಂದೇಶ ಸಾರಲಾಗಿದೆ. ಈಗಾಗಲೇ ರಾಜ್ಯಾದ್ಯಂತ ಕರಟಕ ದಮನಕ ಸಿನಿಮಾ ಬಿಡುಗಡೆಯಾಗಿದ್ದು, ಸಿನಿ ರಸಿಕರು ಕಣ್ತುಂಬಿಕೊಳ್ಳುತ್ತಿದ್ದಾರೆ‌. ಅಲ್ಲದೇ ಶಿವಣ್ಣನವರ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದರ ನಡುವೆಯೇ ಇಂದು ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟ ಡಾ.ಶಿವರಾಜ್ ಕುಮಾರ್ ಇಬ್ಬರು ಬೆಣ್ಣೆ ನಗರಿಗೆ ಭೇಟಿ ಕೊಟ್ಟಿದ್ದಾರೆ.

ನಗರದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಿಂದ ತ್ರಿಶೂಲ್ ಸಿನಿಮಾ ಮಂದಿರ ತನಕ ಭರ್ಜರಿ ರೋಡ್ ಶೋ ಮಾಡಲಾಯಿತು. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿದ್ದರು. ಈ ವೇಳೆ, ನಟ ಶಿವರಾಜ್ ಕುಮಾರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, "ನಾವು ಈಗಾಗಲೇ ಬಳ್ಳಾರಿ, ದಾವಣಗೆರೆ, ಬೆಳಗಾವಿ, ಹೊಸಪೇಟೆ, ರಾಣೆಬೆನ್ನೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಚಿತ್ರದ ಪ್ರಚಾರ ಮಾಡಿದ್ದೇವೆ.

ಇದೊಂದು ಪರ್ಫೆಕ್ಟ್ ಸಿನಿಮಾ ಎಂದು ಜನ ಹೇಳ್ತಿದ್ದಾರೆ, ನೀರಿನ ಸಮಸ್ಯೆ ಎಷ್ಟಿದೆ ಮತ್ತು ಇದರಿಂದ ಜನ ಊರುಗಳನ್ನು ಬಿಟ್ಟು ಹೋಗ್ತಿರುವ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ನರಿ ಬುದ್ದಿ ಬಗ್ಗೆ ತಿಳಿಸಲಾಗಿದೆ, ಇಡೀ ಕಥೆಯನ್ನು ಗಾಢವಾಗಿ ಹೆಣೆಯಲಾಗಿದೆ. ಈ ಸಿನಿಮಾ ನೋಡಿ ಜನ ನೀರು ಮಿತವಾಗಿ ಬಳಕೆ ಮಾಡಬಹದು, ತಮ್ಮ ಊರುಗಳಿಗೆ ಮರಳಬಹುದು, ಇದನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ನಂತರ ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ಜನ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬರುತ್ತಾರೆ. ಆದರೆ ದುಡಿಯಲು ದೇಶ ಬಿಟ್ಟು ಹೋಗು ಆದರೆ, ಹುಟ್ಟಿದ ಊರು, ಕುಡಿದ ನೀರು ಮಾತ್ರ ಮರಿಬೇಡಿ, ತಂದೆ - ತಾಯಿಯನ್ನು ಮರೆಯುವುದು ಒಂದೇ ಊರನ್ನು ಮರಿಯುವುದು ಒಂದೆ. ತಮ್ಮ ಊರುಗಳನ್ನು ಮರೆಯಬೇಡಿ, ಈಗಾಗಲೇ ದಾವಣಗೆರೆಯಿಂದ ಪ್ರಚಾರ ಆರಂಭಿಸಲಾಗಿದೆ ಎಂದ ಅವರು ಸಿನಿಮಾ ನೋಡಿದವರಿಗೆ ಧನ್ಯವಾದಗಳನ್ನು ತಿಳಿಸಿದರು.

ಇದನ್ನೂ ಓದಿ:ನೀನಾಸಂ ಸತೀಶ್ - ರಚಿತಾ ರಾಮ್ ನಟನೆಯ ಮ್ಯಾಟ್ನಿ ಚಿತ್ರ ತಂಡದಿಂದ ಗುಡ್ ನ್ಯೂಸ್

ABOUT THE AUTHOR

...view details