ಕರ್ನಾಟಕ

karnataka

ETV Bharat / state

ಹಾವೇರಿ: ಕೇಂದ್ರ ಸರ್ಕಾರದ ವಿರುದ್ಧ ನಟ ಪ್ರಕಾಶ್​ ರಾಜ್​ ವಾಗ್ದಾಳಿ - Prakash Raj - PRAKASH RAJ

ಕೇಂದ್ರ ಸರ್ಕಾರದ ವಿರುದ್ಧ ಬಹುಭಾಷಾ ನಟ ಪ್ರಕಾಶ್​ ರಾಜ್​ ವಾಗ್ದಾಳಿ ಮುಂದುವರೆಸಿದ್ದಾರೆ.

actor  Prakash Raj
ನಟ ಪ್ರಕಾಶ್ ರಾಜ್​​

By ETV Bharat Karnataka Team

Published : May 1, 2024, 6:41 PM IST

Updated : May 1, 2024, 8:25 PM IST

ನಟ ಪ್ರಕಾಶ್ ರಾಜ್​​

ಹಾವೇರಿ: ನಗರದಲ್ಲಿಂದು ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಟ ಪ್ರಕಾಶ್​ ರಾಜ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

"ನಾನು ಯಾವ ಪಕ್ಷದವನೂ ಅಲ್ಲ. ನಾನು ನಿಮ್ಮ ಪಕ್ಷದವನು. ಮಾಧ್ಯಮ ನಾವು, ನೀವು, ವಿರೋಧ ಪಕ್ಷದವರು ಎಲ್ಲರೂ ಒಂದೇ. ಯಾವುದೇ ಸರ್ಕಾರ ಇದ್ದರೂ ನಾವು ವಿರೋಧ ಪಕ್ಷದವರು. ನಾವು ವಿರೋಧ ಪಕ್ಷದಲ್ಲಿದ್ದಾಗ ಮಾತ್ರ ದೇಶ ಬೆಳೆಯುತ್ತದೆ" ಎಂದು ತಿಳಿಸಿದರು.

"ಆತಂಕವಾದಿಗಳ ಸರ್ಕಾರ ಕೇಂದ್ರದಲ್ಲಿದೆ. ಉದ್ಯೋಗದ ಗ್ಯಾರಂಟಿ ಇಲ್ಲ. ಕಳಪೆ ಮಟ್ಟದ ಆಹಾರ ನೀಡುತ್ತಿದೆ. ಎಲ್ಲಾ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ಹಚ್ಚಲಾಗುತ್ತಿದೆ. ಆಗಾಗ್ಗೆ ಬಿಟ್ಟಿ ಭಾಗ್ಯ ಕೊಡುವ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ನಾಯಕರು ರಾಜರಂತೆ ಓಡಾಡುತ್ತಿದ್ದಾರೆ. ಪುಷ್ಪಕ ವಿಮಾನದಲ್ಲಿ ಬರುತ್ತಾರೆ. ನಾಯಕರು ನಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಿದ್ದಾರಾ?. ಜಾತಿ, ಧರ್ಮ, ಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ. ಉದ್ಯೋಗ ಸೃಷ್ಟಿ ಮಾಡುತ್ತಿದ್ದಾರಾ ಈ ಮಹಾಪ್ರಭುಗಳು" ಎಂದು ಪ್ರಶ್ನಿಸಿದರು.

ಇದನ್ನೂ ಓದಿ:'ಸತ್ಯ ಆದಷ್ಟು ಬೇಗ ಹೊರಬರಲಿದೆ': ಎಸ್ಐಟಿ ಎದುರು ಹಾಜರಾಗಲು ಕಾಲಾವಕಾಶ ಕೇಳಿದ ಪ್ರಜ್ವಲ್ ರೇವಣ್ಣ - Prajwal Revanna

"ಉದ್ಯೋಗ ಸೃಷ್ಟಿ ಇಲ್ಲ. ಬೆಂಬಲ ಬೆಲೆ ಕೇಳಿದರೆ, ರಸ್ತೆ ಅಗೆದು, ವಾಟರ್ ಗನ್ ಹೊಡೆದು ರೈತರನ್ನು ಆತಂಕವಾದಿಗಳು, ತುಕಡಿ ತುಕಡಿ ಗ್ಯಾಂಗ್ ಎನ್ನುತ್ತಾರೆ. ರೈತ ಏನೂ ಮಾಡಲಾಗದೇ ಘನತೆ, ಗೌರವ ಇಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣಾ ಚಾಣಕ್ಯ ಈ ಬಗ್ಗೆ ಮಾತನಾಡಲಿ. 27 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ. ಆದ್ರೆ ಪ್ರಯೋಜನವೇನು ಎಂದರು.

Last Updated : May 1, 2024, 8:25 PM IST

ABOUT THE AUTHOR

...view details