ಕರ್ನಾಟಕ

karnataka

ETV Bharat / state

ಬೆಂಗಳೂರು: ತನ್ನ ಲವರ್‌ಗೆ ಆಪ್ತನಾಗುತ್ತಿದ್ದಾನೆ ಎಂದು ಬಾಲ್ಯ ಸ್ನೇಹಿತನನ್ನ ಹತ್ಯೆಗೈದಿದ್ದ ಆರೋಪಿಯ ಬಂಧನ - Accused killed his friend - ACCUSED KILLED HIS FRIEND

ತನ್ನ ಪ್ರೇಯಸಿಯೊಂದಿಗೆ ಹತ್ತಿರವಾಗುತ್ತಿದ್ದಾನೆ ಎಂದು ಬಾಲ್ಯ ಸ್ನೇಹಿತನನ್ನೇ ಹತ್ಯೆಗೈದಿದ್ದ ಆರೋಪಿಯನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Accused
ದಿವೇಶ್ ಹೆಗಡೆ (ETV Bharat)

By ETV Bharat Karnataka Team

Published : Sep 24, 2024, 4:11 PM IST

ಬೆಂಗಳೂರು : ಯುವತಿಗಾಗಿ ರೂಮ್‌ಮೇಟ್‌ನ್ನ ಕೊಲೆ ಮಾಡಿದ್ದ ಆರೋಪಿಯನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಕುದ್ರು ಮೂಲದ ದಿವೇಶ್ ಹೆಗಡೆ (24) ಬಂಧಿತ ಆರೋಪಿ.

ಸೆಪ್ಟೆಂಬರ್ 21ರಂದು ಸಂಜಯನಗರ ವ್ಯಾಪ್ತಿಯ ಗೆದ್ದಲಹಳ್ಳಿಯಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ವರುಣ್ ಕೋಟ್ಯಾನ್ (24) ಎಂಬಾತನನ್ನ ಹತ್ಯೆಗೈದ ಪ್ರಕರಣ ನಡೆದಿತ್ತು.

ಡಿಸಿಪಿ ಸೈದುಲು ಅಡಾವತ್ ಮಾತನಾಡಿದರು (ETV Bharat)

ಈ ಕುರಿತು ಬೆಂಗಳೂರು ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಅವರು ಮಾತನಾಡಿ, ಹತ್ಯೆಯಾದ ವರುಣ್ ಕೋಟ್ಯಾನ್ ಹಾಗೂ ದಿವೇಶ್ ಇಬ್ಬರೂ ಸಹ ಬಾಲ್ಯ ಸ್ನೇಹಿತರು. ಉನ್ನತ ವ್ಯಾಸಂಗ ಮುಗಿಸಿದ್ದ ಇಬ್ಬರೂ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಗೆದ್ದಲಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದಿದ್ದಾರೆ.

ಇಬ್ಬರಿಗೂ ಬಾಲ್ಯ ಸ್ನೇಹಿತೆಯಾಗಿದ್ದ ಯುವತಿಯೊಬ್ಬಳನ್ನ ದಿವೇಶ್ ಪ್ರೀತಿಸುತ್ತಿದ್ದ. ಮತ್ತೋರ್ವ ಯುವತಿಯನ್ನ ಪ್ರೀತಿಸುತ್ತಿದ್ದ ವರುಣ್ ಕೋಟ್ಯಾನ್ ಇತ್ತೀಚಿಗೆ ಕೆಲ ದಿನಗಳಿಂದ ದಿವೇಶ್ ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಆಪ್ತತೆಯಿಂದ ವರ್ತಿಸತೊಡಗಿದ್ದ. ಅದೇ ವಿಚಾರವಾಗಿ ಇಬ್ಬರ ನಡುವೆಯೂ ಆಗಾಗ ಗಲಾಟೆಯಾಗುತ್ತಿತ್ತು ಎಂದು ಹೇಳಿದ್ದಾರೆ.

ಶುಕ್ರವಾರ ವರುಣ್ ಬರ್ತ್​ಡೇ ಇದ್ದಿದ್ದರಿಂದ ಯುವತಿ ಸೇರಿದಂತೆ ನಾಲ್ವರು ಸ್ನೇಹಿತರು ರಾತ್ರಿ ಊಟ ಮುಗಿಸಿ, ಹೊರಗಡೆ ಸುತ್ತಾಡಿದ್ದರು. ತಾನು ಪ್ರೀತಿಸುತ್ತಿದ್ದ ಯುವತಿ ವರುಣ್ ಜೊತೆ ಆಪ್ತವಾಗಿರುವುದಕ್ಕೆ ದಿವೇಶ್ ಸಿಟ್ಟಾಗಿದ್ದ. ಬಳಿಕ ಬೆಳಗಿನಜಾವ ವರುಣ್ ಹಾಗೂ ದಿವೇಶ್ ಮನೆಗೆ ಬಂದಿದ್ದರು. ಮಾರನೆ ದಿನ ಬೆಳಗ್ಗೆ ಇಬ್ಬರ ನಡುವೆ ಪುನಃ ಜಗಳ ಆರಂಭವಾಗಿತ್ತು. ಜಗಳವಾಡುತ್ತಲೇ ಇಬ್ಬರೂ ಮನೆಯಿಂದ ಹೊರಬಂದಿದ್ದರು. ಈ ವೇಳೆ ಸಿಟ್ಟಿಗೆದ್ದ ಆರೋಪಿ ದಿವೇಶನು ವರುಣ್‌ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ತೆರಳಿದಾಗ ಸ್ಥಳದಲ್ಲೇ ಇದ್ದ ಆರೋಪಿ ದಿವೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಹತ್ಯೆಗೆ ಕಾರಣವನ್ನ ದಿವೇಶ್ ಬಾಯ್ಬಿಟ್ಟಿದ್ದಾನೆ. ಸದ್ಯ ದಿವೇಶ್​ನನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಇದನ್ನೂ ಓದಿ :ಪತಿ, ಸಹೋದರನೊಂದಿಗೆ ಜಗಳವಾಡಿ ಒಂಟಿ ಬದುಕು: ಅನುಮಾನಕ್ಕೆ ಕಾರಣವಾದ ಮಹಾಲಕ್ಷ್ಮಿ ಹತ್ಯೆ ಕೇಸ್ - Mahalakshmi Murder Case Probe

ABOUT THE AUTHOR

...view details