ಕರ್ನಾಟಕ

karnataka

ETV Bharat / state

ಸಹಾಯ ಮಾಡಲು ಬಂದ ಪರಿಚಿತನಿಂದ ಕೇರಳದ ಯುವತಿ ಮೇಲೆ ಅತ್ಯಾಚಾರ; ಆರೋಪಿ ಬಂಧನ - Rape Case - RAPE CASE

ಸಹಾಯ ಮಾಡಲು ಬಂದ ಪರಿಚಿತನಿಂದ ಕೇರಳದ ಯುವತಿ ಮೇಲೆ ಅತ್ಯಾಚಾರ ನಡೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.

KERALA YOUNG WOMAN RAPED  RAPED BY AN ACQUAINTANCE  MANGALURU
ಕೇರಳದ ಯುವತಿಯ ಅತ್ಯಾಚಾರ (ಕೃಪೆ: ETV Bharat Karnataka)

By ETV Bharat Karnataka Team

Published : May 29, 2024, 7:27 PM IST

ಮಂಗಳೂರು: ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ಕೇರಳದ ಯುವತಿಗೆ ಸಹಾಯ ಮಾಡಲು ಬಂದ ಪರಿಚಿತ ಅತ್ಯಾಚಾರವೆಸಗಿದ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಸುಜಿತ್ ಬಂಧಿತ ಆರೋಪಿ.

ಕಾಸರಗೋಡು ಮೂಲದ ಯುವತಿ ಮೇ 15 ರಂದು ಮಂಗಳೂರು ಪೂರ್ವ ಠಾಣೆಯಲ್ಲಿ ಈ‌ ಬಗ್ಗೆ ದೂರು ದಾಖಲಿಸಿದ್ದರು. ಮಾರ್ಚ್ 13 ರಂದು ಯುವತಿ ಪಿಸ್ತುಲ್ಲಾ ಕಾಯಿಲೆಗೆ ಚಿಕಿತ್ಸೆಯನ್ನು ಪಡೆಯಲು ಎ.ಜೆ. ಆಸ್ಪತ್ರೆಗೆ ಸುಜಿತ್ ಅವರೊಂದಿಗೆ ಬಂದಿದ್ದರು. ಆಸ್ಪತ್ರೆಯ ರೂಮ್​ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಾಗ ಮಾ. 16 ರಂದು ರಾತ್ರಿ ಸುಜಿತ್ ಅತ್ಯಾಚಾರ ಮಾಡಿದ್ದಾನೆ. ಅಷ್ಟು ಮಾತ್ರವಲ್ಲದೆ ಆಕೆಯ ನಗ್ನ ಫೋಟೋಗಳನ್ನು ತನ್ನ ಫೋನ್​ನಲ್ಲಿ ಸೆರೆಹಿಡಿದಿದ್ದಾನೆ.

'ಏಪ್ರಿಲ್ 4 ರಂದು ಸುಜಿತ್​ ನನಗೆ ನಗ್ನ ಪೋಟೋಗಳನ್ನು ತೋರಿಸಿ ಮಂಗಳೂರಿಗೆ‌ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದು ಏ. 4 ರಿಂದ 8 ವರೆಗೆ ಮಂಗಳೂರಿನ ಮಹಾರಾಜಾ ರೆಸಿಡೆನ್ಸಿ ಹೋಟೆಲ್​ನಲ್ಲಿ ಹೆದರಿಸಿ ಬಲವಂತವಾಗಿ ಅತ್ಯಾಚಾರ ಮಾಡಿ, ಮತ್ತೆ ನಗ್ನ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ನನಗೆ ಪುಡ್ ಪಾಯಿಜನ್ ಆಗಿದ್ದರಿಂದ ಏ. 8 ರಿಂದ 10 ರವರೆಗೆ ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದೆ. ಆಗ ಚಿಕಿತ್ಸೆ ಪಡೆಯುತ್ತಿರುವ ಸಮಯದಲ್ಲಿಯೂ ಸುಜಿತ್ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಯಾರಲ್ಲಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ' ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಯುವತಿ ನೀಡಿದ ದೂರಿನಂತೆ ಮೊ.ನಂ: 74/24 ಕಲಂ 376, 506 ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ:ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ - ANTICIPATORY BAIL

ABOUT THE AUTHOR

...view details