ಕರ್ನಾಟಕ

karnataka

ETV Bharat / state

ಉಡುಪಿ: ನಿಂತ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ, ಹಲವರಿಗೆ ಗಾಯ - TOURIST VEHICLE LORRY ACCIDENT

ಇಂದು ಮುಂಜಾನೆ ನಿಂತಿದ್ದ ಲಾರಿಗೆ ಹಿಂದಿನಿಂದ ಮಿನಿ ಬಸ್​ ಡಿಕ್ಕಿ ಹೊಡೆದು 17 ಮಂದಿ ಗಾಯಗೊಂಡಿದ್ದಾರೆ.

LORRY MINI BUS ACCIDENT
ಅಪಘಾತಕ್ಕೀಡಾದ ಮಿನಿಬಸ್​​ (ETV Bharat)

By ETV Bharat Karnataka Team

Published : Nov 3, 2024, 12:54 PM IST

ಉಡುಪಿ:ಮಿನಿ ಬಸ್​ ಮತ್ತು ಲಾರಿ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಹೊರಟಿದ್ದ ತಮಿಳುನಾಡಿನ 17 ಮಂದಿ ಗಾಯಗೊಂಡಿದ್ದಾರೆ. ಉದ್ಯಾವರ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ ಮುಂಜಾನೆ ಘಟನೆ ನಡೆದಿದೆ.

ಮಂಗಳೂರು ಕಡೆಯಿಂದ ಕೊಲ್ಲೂರು ದೇವಾಲಯಕ್ಕೆ ಹೋಗುತ್ತಿದ್ದ ಮಿನಿ ಬಸ್ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳ ಪೈಕಿ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟೂರಿಸ್ಟ್ ವಾಹನ ಜಖಂಗೊಂಡಿದೆ.

ಅಪಘಾತಕ್ಕೀಡಾದ ಮಿನಿಬಸ್​​ (ETV Bharat)

ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ರಸ್ತೆ ದಾಟುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ: ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ‌ ಸೆರೆ

ABOUT THE AUTHOR

...view details