ಕರ್ನಾಟಕ

karnataka

By ETV Bharat Karnataka Team

Published : Jun 18, 2024, 9:01 PM IST

ETV Bharat / state

ದಾವಣಗೆರೆ: ಆನ್‌ಲೈನ್‌ನಲ್ಲಿ ಹಣ ಹೂಡಿಕೆ, ಉಪನ್ಯಾಸಕನಿಗೆ ₹20 ಲಕ್ಷ ವಂಚಿಸಿದ ಸೈಬರ್​ ಖದೀಮರು - cyber Fraud

ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿ ಉಪನ್ಯಾಸಕನಿಗೆ 20 ಲಕ್ಷ ವಂಚಿಸಿದ ಘಟನೆ ದಾವಣಗೆರೆ ನಡೆದಿದೆ. ಈ ಸಂಬಂಧ ವಂಚನೆಗೊಳಗಾದ ಉಪನ್ಯಾಸಕ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಪನ್ಯಾಸಕನಿಗೆ ₹20 ಲಕ್ಷ ವಂಚಿಸಿದ ಸೈಬರ್​ ಖದೀಮರು
ಉಪನ್ಯಾಸಕನಿಗೆ ₹20 ಲಕ್ಷ ವಂಚಿಸಿದ ಸೈಬರ್​ ಖದೀಮರು (Etv Bharat)

ದಾವಣಗೆರೆ: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿ ಉಪನ್ಯಾಸಕನಿಗೆ 20 ಲಕ್ಷ ರೂಪಾಯಿ ವಂಚಿಸಿದ ಘಟನೆ ದಾವಣಗೆರೆ ನಗರದ ನಿಟ್ಟುವಳ್ಳಿ ಹೊಸ ಬಡಾವಣೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾದ ಉಪನ್ಯಾಸಕ ಮಾರ್ಚ್​ 24 ರಿಂದ ಮೇ 31ರ ವರೆಗೆ ಬರೋಬ್ಬರಿ 20,10,014 ಲಕ್ಷ ರೂ. ಗಳನ್ನು ಆನ್​ಲೈನ್​ ವಂಚಕರಿಗೆ ಪಾವತಿಸಿ ಮೋಸ ಹೋಗಿದ್ದಾರೆ. ಈ ಸಂಬಂಧ ವಂಚನೆಗೊಳಗಾದ ಉಪನ್ಯಾಸಕ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣದ ಹಿನ್ನೆಲೆ: "ಉಪನ್ಯಾಸಕ ತಮ್ಮ ಇನ್​ಸ್ಟಾಗ್ರಾಂ ನೋಡುತ್ತಿರುವಾಗ ಗೋಲ್ಡ್‌ಮನ್ ಸ್ಯಾಕ್ಸ್ ಬ್ಯುಸಿನೆಸ್ ಸ್ಕೂಲ್​ ಎಂಬ ಜಾಹೀರಾತು ಕಣಿಸಿದೆ. ಅವರು ಅದರ ಲಿಂಕ್ ಕ್ಲಿಕ್ ಮಾಡಿದ ತಕ್ಷಣವೇ ವಾಟ್ಸ್​ಆ್ಯಪ್​ ಗುಂಪಿಗೆ ನಂಬರ್​ ಸೇರ್ಪಡೆಯಾಗಿದೆ. ಆ ವ್ಯಾಟ್ಸ್​ಆ್ಯಪ್​ ಗುಂಪಿನಲ್ಲಿ ಆನ್‌ಲೈನ್​ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಕೊಡಿಸುವ ಸಂದೇಶ ಬಂದಿದೆ. ಇದನ್ನು ನಂಬಿದ ಉಪನ್ಯಾಸಕ ಮೊದಲು 20 ಸಾವಿರ ರೂ. ಪ್ರವೇಶ ಶುಲ್ಕ ಪಾವತಿಸಿದ್ದಾರೆ. ಬಳಿಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ."

"ಬಳಿಕ ವಾಟ್ಸ್‌ಆ್ಯಪ್​ ಗುಂಪಿನಲ್ಲಿ ನೀಡಿದ್ದ ಬ್ಯಾಂಕ್ ಖಾತೆಗಳಿಗೆ ಉಪನ್ಯಾಸಕ ತನ್ನ ಹಾಗೂ ಪತ್ನಿ ಖಾತೆಗಳಿಂದ ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾರೆ. ಆರಂಭದಲ್ಲಿ ವಂಚಕರು ಖಾಸಗಿ ಕಂಪನಿಯೊಂದರ ಷೇರು ಖರೀದಿಸಲು ತಿಳಿಸಿದ್ದಾರೆ. ಅದರಂತೆ ಉಪನ್ಯಾಸಕ 20,10,014 ಹೂಡಿಕೆ ಮಾಡಿದ್ದಾರೆ. ಇದಕ್ಕೆ ವಂಚಕರು 94,92,003 ಲಾಭ ತೋರಿಸಿದ್ದಾರೆ. ನಂತರ ಉಪನ್ಯಾಸಕ ಹಣ ನಗದೀಕರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ₹18 ಲಕ್ಷ ತೆರಿಗೆ ಪಾವತಿಸಿದರೆ ಮಾತ್ರ ಲಾಭಾಂಶ ಮರಳಿಸಲು ಸಾಧ್ಯ ಎಂಬ ಸಂದೇಶ ಬಂದಿದೆ. ಇದರಿಂದ ಅನುಮಾನಗೊಂಡ ಉಪನ್ಯಾಸಕ ಸೆನ್​ ಪೊಲೀಸ್​ ಠಾಣೆ ತೆರಳಿ ದೂರು ದಾಖಲು ಮಾಡಿದ್ದಾರೆ. ದೂರಿನನ್ವಯ ದಾಖಲಾಗಿದೆ" ಎಂದು ಸಿಇಎನ್ ಠಾಣೆಯ ಸಿಪಿಐ ಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ಮುಂಬೈ ಪೊಲೀಸ್​ ಸೋಗಿನಲ್ಲಿ ಬ್ಯಾಂಕ್ ಉದ್ಯೋಗಿಗೆ ₹17 ಲಕ್ಷ ವಂಚನೆ! - cyber Fraud

ABOUT THE AUTHOR

...view details