ಚಾಮರಾಜನಗರ:ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ವಿರುದ್ಧ 'ಗೋ ಬ್ಯಾಕ್ ಸುನಿಲ್ ಬೋಸ್' ಪೋಸ್ಟರ್ ಅಂಟಿಸಲಾಗಿದೆ. ನಾಮಿನೇಷನ್ ದಿನವೇ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ರಸ್ತೆಯಲ್ಲಿ ಪೋಸ್ಟರ್ ಪ್ರತ್ಯಕ್ಷವಾಗಿದೆ. ಜೊತೆಗೆ ಗೋಡೆ ಬರಹವನ್ನೂ ಬರೆಯಲಾಗಿದ್ದು, ಈ ಬಗ್ಗೆ ಸುನಿಲ್ ಬೋಸ್ ಪ್ರತಿಕ್ರಿಯೆ ನೀಡಿದ್ದಾರೆ.
ಮರಳು ದಂಧೆ ಸಾಬೀತುಪಡಿಸಿದರೆ ನಾಮಪತ್ರವೇ ಸಲ್ಲಿಸಲ್ಲ:ಸುನಿಲ್ ಬೋಸ್ ಪೋಸ್ಟರ್ಗೆ ವಿಚಾರಕ್ಕೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ್ದು, "'ಗೋ ಬ್ಯಾಕ್ ಸುನಿಲ್ ಬೋಸ್' ಎಂದು ಪೋಸ್ಟರ್ ಅಂಟಿಸಿರುವುದು ಬಿಜೆಪಿಯವರು. ಅವರೇ ಅಪಪ್ರಚಾರ ಮಾಡುತ್ತಿದ್ದಾರೆ. ಗೋ ಬ್ಯಾಕ್ ಅಂಥಾ ಯಾಕೆ ಹಾಕಿದ್ದಾರೆ.? ನಾನು ಹೊರಗಿನವನಾ?. ಮರಳು ಮಾಫಿಯಾ ಕೇಸ್ ಕೋರ್ಟ್ನಲ್ಲಿ ವಜಾ ಆಗಿದೆ. ಕ್ಲೀನ್ ಚಿಟ್ ಕೊಡಲಾಗಿದೆ. ಬಿಜೆಪಿಯವರಿಗೆ ಸವಾಲು ಹಾಕುತ್ತೇನೆ. ನನ್ನ ವಿರುದ್ಧ ಮರಳು ದಂಧೆ ಆರೋಪ ಸಾಬೀತು ಮಾಡಿದರೇ ನಾನು ನಾಮಪತ್ರವನ್ನೇ ಸಲ್ಲಿಸುವುದಿಲ್ಲ" ಎಂದರು.
ಮುಂದುವರೆದು, "ಗೋ ಬ್ಯಾಕ್ ಬರೆದವರ ವಿರುದ್ಧ ದೂರು ಕೊಡುತ್ತೇನೆ. ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ದೂರು ಕೊಡಲಾಗುವುದು. ಮಾಧ್ಯಮವರು ಹೇಳಿದ ಮೇಲೆ "ಗೋ ಬ್ಯಾಕ್" ವಿಚಾರ ಗಮನಕ್ಕೆ ಬಂದಿದೆ. ಬಿಜೆಪಿಯವರು ಈ ಅಪಪ್ರಚಾರ ಮಾಡಿದ್ದಾರೆ ಎಂದು ಕಿಡಿಕಾರಿದ್ದು, ಕರ್ನಾಟಕದಲ್ಲಿ ಮೋದಿ ಹವಾ ಇಲ್ಲ. ಕಾಂಗ್ರೆಸ್ ಈ ಬಾರಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.