ಕರ್ನಾಟಕ

karnataka

ETV Bharat / state

ಯುವಕನ ಲಿಂಗ ಪರಿವರ್ತಿಸಿದ ಆರೋಪ: ಐವರು ತೃತೀಯ ಲಿಂಗಿಗಳ ವಿರುದ್ಧ FIR - Transgender Assault Case - TRANSGENDER ASSAULT CASE

ಮಂಗಳಮುಖಿಯಾಗುವಂತೆ ಒತ್ತಾಯಿಸಿ ಯುವಕನ ಲಿಂಗ ಪರಿವರ್ತಿಸಿದ ಆರೋಪದಡಿ ಐವರು ತೃತೀಯ ಲಿಂಗಿಗಳ ವಿರುದ್ಧ ಬೆಂಗಳೂರಿನ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Aug 20, 2024, 7:20 PM IST

ಬೆಂಗಳೂರು:ಮಂಗಳಮುಖಿಯಾಗುವಂತೆ ಒತ್ತಾಯಿಸಿ ಯುವಕನ ಲಿಂಗ ಪರಿವರ್ತಿಸಿದ ಆರೋಪದ ಮೇರೆಗೆ ಐವರು ತೃತೀಯ ಲಿಂಗಿಗಳ ವಿರುದ್ಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

18 ವರ್ಷದ ಯುವಕ ನೀಡಿದ ದೂರಿನ ಮೇರೆಗೆ ಚಿತ್ರಾ, ಪ್ರೀತಿ, ಕಾಜಲ್, ಅಶ್ವಿನಿ, ಮುಗಿಲ ಎಂಬವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಡಿ.ಜೆ.ಹಳ್ಳಿಯಲ್ಲಿ ವಾಸವಾಗಿದ್ದ ಯುವಕ ಟೀ ಅಂಗಡಿಯಲ್ಲಿ 3 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಅದೇ ಟೀ ಅಂಗಡಿಗೆ ಬರುತ್ತಿದ್ದ ತೃತೀಯ ಲಿಂಗಿಗಳ ಕಣ್ಣು ಯುವಕನ ಮೇಲೆ ಬಿದ್ದಿದೆ. "ನಿನ್ನನ್ನು ದೊಡ್ಡ ಮನೆಯಲ್ಲಿಟ್ಟುಕೊಂಡು ಹಣ ಸಂಪಾದಿಸುವ ಒಳ್ಳೆಯ ದಾರಿ ತೋರಿಸುತ್ತೇವೆ" ಎಂದು ಪುಸಲಾಯಿಸಿದ್ದಾರೆ.

ಆರೋಪಿಗಳನ್ನು ನಂಬಿದ ಯುವಕ ಅವರೊಂದಿಗೆ ಹೋದಾಗ ಕೊಲೆ ಮಾಡುವುದಾಗಿ ಬೆದರಿಸಿ ಭಿಕ್ಷಾಟನೆಗೆ‌ ತಳ್ಳಿದ್ದಾರೆ. ಹೀಗೆ ಮೂರು ವರ್ಷಗಳ‌ ಕಾಲ ಭಿಕ್ಷಾಟನೆ ಮಾಡಿ ಮಂಗಳಮುಖಿಯರಿಗೆ ಯುವಕ ಹಣ ತಂದುಕೊಟ್ಟಿದ್ದಾನೆ. ಇನ್ನೂ ಹೆಚ್ಚು ಸಂಪಾದಿಸಬೇಕು ಎಂಬ ದುರುದ್ದೇಶಕ್ಕೆ ಬಿದ್ದ ಮಂಗಳಮುಖಿಯರು, "ನೀನು ಗಂಡಾಗಿರುವಾಗಲೇ ದಿನಕ್ಕೆ 2 ಸಾವಿರ ದುಡಿಯುತ್ತಿದ್ದಿ. ಹೆಣ್ಣಾದರೆ ಹೆಚ್ಚು ಸಂಪಾದಿಸಬಹುದು ಎಂದು ಲಿಂಗ ಪರಿವರ್ತನೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೆ ಯುವಕ ಒಪ್ಪದಿದ್ದಾಗ ಆತನನ್ನು ಹಿಂಸಿಸಿ ಬೆನ್ನಿಗೆ ಮತ್ತು ಬರುವ ಇಂಜೆಕ್ಷನ್ ಕೊಟ್ಟು ಲಿಂಗ ಪರಿವರ್ತಿಸಿದ್ದಾರೆ. ನಂತರ ಯುವಕನನ್ನು ದೇವರ ಬಳಿ ಕರೆದೊಯ್ದು ಪೂಜೆ ಸಲ್ಲಿಸಿ, ಲೈಂಗಿಕ ಕಾರ್ಯಕರ್ತಳಾಗಿ ಕೆಲಸ ಮಾಡು ಎಂದು ಪೀಡಿಸಿದ್ದಾರೆ. ಇಷ್ಟಕ್ಕೆ ಬಿಡದೇ 5 ಲಕ್ಷ ಹಣ ಕೊಡು ಎಂದು ಯುವಕನನ್ನು ಹಿಂಸಿಸಿದ್ದಾರೆ. ಇದರಿಂದ ನೊಂದ ಯುವಕ ಮಂಗಳಮುಖಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

"ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಮೂರು ವರ್ಷಗಳ ಹಿಂದೆ ಪರಿಚಯವಾಗಿದ್ದ ಆರೋಪಿಗಳ ಗ್ಯಾಂಗ್ ಒಳ್ಳೆಯ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ. ಲಿಂಗ ಪರಿವರ್ತನೆ ಮಾಡಿ ಬಲವಂತದಿಂದ ಕೂಡಿ ಹಾಕಿದ್ದರು. ಹೇಗೋ ತಪ್ಪಿಸಿಕೊಂಡು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದೇನೆ. ನ್ಯಾಯ ಸಿಗುವ ಭರವಸೆಯಿದೆ" ಎಂದು ಸಂತ್ರಸ್ತ ಯುವಕ ತಿಳಿಸಿದ್ದಾನೆ.

ಇದನ್ನೂ ಓದಿ:ಬೆಂಗಳೂರು: ತೃತೀಯ ಲಿಂಗಿಯನ್ನು ಹತ್ಯೆ ಮಾಡಿದ್ದ ಮಹಿಳೆ ಬಂಧನ - Transgender Murder

ABOUT THE AUTHOR

...view details