ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಟೈಯರ್ ಸ್ಫೋಟಗೊಂಡು ಲಾರಿಗೆ ಕಾರು ಡಿಕ್ಕಿ: ಅಜ್ಜ, ಮಗ, ಮೊಮ್ಮಗ ಸಾವು - Car Accident in Hubli - CAR ACCIDENT IN HUBLI

ಟೈಯರ್ ಸ್ಫೋಟಗೊಂಡ ಪರಿಣಾಮ ಕಾರು, ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸೇರಿ‌ ಮೂವರ ಸಾವಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ಸಂಭವಿಸಿದೆ.

CAR COLLIDES WITH LORRY  TIRE EXPLODES  PEOPLE DIED IN ACCIDENT  DHARWAD
ಬಾಲಕ ಸೇರಿ‌ ಒಂದೇ ಕುಟುಂಬದ ಮೂವರ ಸಾವು (ETV Bharat)

By ETV Bharat Karnataka Team

Published : Aug 24, 2024, 8:22 AM IST

ಹುಬ್ಬಳ್ಳಿ:ಓಮಿನಿ ಕಾರಿನ ಟೈಯರ್ ಸ್ಫೋಟಗೊಂಡು ಮುಂದೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸೇರಿ ಮೂವರು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಬಳಿ ನಡೆದಿದೆ.

ಮೃತರೆಲ್ಲರೂ ಒಂದೇ ಕುಟುಂಬದರಾಗಿದ್ದು, ಕೊಪ್ಪಳ ತಾಲೂಕಿನ ಮಂಗಳಾಪೂರ ಗ್ರಾಮದ ನಿವಾಸಿಗಳಾಗಿದ್ದಾರೆ. ಮೃತರನ್ನು ಜಾಫರಸಾಬ ಮಂಗಳೂರು (60), ಮುಸ್ತಫಾ (ಸಾಹೇಬ) ಮಂಗಳೂರು (36) ಮತ್ತು ಶೊಹೇಬ್ ಮಂಗಳೂರು (06) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಇನ್ನೂ ಮೂವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಎಸ್‌ಡಿಎಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ:ತುಂಡಾಗಿದ್ದ ಕೈಯನ್ನು ಯಶಸ್ವಿಯಾಗಿ ಮರುಜೋಡಿಸಿದ ಶಿವಮೊಗ್ಗ ವೈದ್ಯರು: ಅಪಘಾತದಲ್ಲಿ ಅಂಗಾಂಗ ಕಟ್ ಆದ್ರೆ ಹೀಗೆ ಮಾಡುವಂತೆ ಸಲಹೆ - HAND REATTACHED

ABOUT THE AUTHOR

...view details