ಕರ್ನಾಟಕ

karnataka

ETV Bharat / state

ಶಿವಮೊಗ್ಗ: ವ್ಯಕ್ತಿ ಮೇಲೆ ದಾಳಿ ಮಾಡಿದ್ದ ಕರಡಿ ಸೆರೆ - ಕರಡಿ ದಾಳಿ

ಶಿವಮೊಗ್ಗ ಜಿಲ್ಲೆಯ ಚಂದನಪಾರ್ಕ್ ಹಾಗು ಡಿವಿಜಿ ಪಾರ್ಕ್​ಗಳ ನಡುವೆ ವಾಕ್​ ಮಾಡುತ್ತಿದ್ದ ವ್ಯಕ್ತಿ ಮೇಲೆ ದಾಳಿ ನಡೆಸಿದ್ದ ಕರಡಿಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.

bear-attacked
ವ್ಯಕ್ತಿ ಮೇಲೆ ಕರಡಿ ದಾಳಿ

By ETV Bharat Karnataka Team

Published : Feb 28, 2024, 10:40 AM IST

Updated : Feb 28, 2024, 2:29 PM IST

ವ್ಯಕ್ತಿ ಮೇಲೆ ದಾಳಿ ಮಾಡಿದ್ದ ಕರಡಿ ಸೆರೆ

ಶಿವಮೊಗ್ಗ:ನಗರದ ಗೋಪಾಲಗೌಡ ಬಡಾವಣೆಯಲ್ಲಿ ವಾಕಿಂಗ್ ಹೋದವರಿಗೆ ಪರಚಿದ ಕರಡಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.

ಇಂದು ಬೆಳಗ್ಗೆ ಗೋಪಾಲಗೌಡ ಬಡಾವಣೆಯ ಎಫ್ ಬ್ಲಾಕ್​ನಲ್ಲಿ ಕರಡಿ ಕಾಣಿಸಿಕೊಂಡಿತ್ತು. ಕರಡಿ ಕಂಡು ನಾಯಿಗಳು ಬೊಗಳಿವೆ. ಇದರಿಂದ ಗಾಬರಿಯಾದ ಕರಡಿ ವಾಕಿಂಗ್​ ಮಾಡುವವರ ಕಡೆ ಓಡಿ ಬಂದು, ತುಕಾರಾಂ ಶೆಟ್ಟಿ ಎಂಬುವರ ಹೊಟ್ಟೆ ಭಾಗಕ್ಕೆ ಪರಚಿ ಓಡಿ ಹೋಗಿದೆ. ಕರಡಿ ಕಂಡು ವಾಕಿಂಗ್ ಮಾಡುವವರು ಗಾಬರಿಯಾಗಿ ಮನೆ ಕಡೆ ಓಡಿದ್ದರು. ನಂತರ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು. ಸದ್ಯ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕರಡಿಯನ್ನು ಸೆರೆ ಹಿಡಿದಿದೆ. ಇಲಾಖೆಯ ಈ ಕಾರ್ಯಕ್ಕೆ ಸ್ಥಳೀಯರು ಜೈಕಾರ ಹಾಕಿದ್ದಾರೆ.

ಹೀಗಿತ್ತು ಜಾಂಬವಂತನ ಕಾರ್ಯಚರಣೆ:ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಮೊದಲು ಕರಡಿ ಅಡಗಿರುವ ಸ್ಥಳವನ್ನು ಕಂಡು ಹಿಡಿದಿದ್ದಾರೆ. ನಂತರ ಇಲಾಖೆ ಬಲೆ ಹಿಡಿದುಕೊಂಡು ಸೆರೆ ಹಿಡಿಯಲು ಪ್ರಯತ್ನಿಸಿದರು. ಈ ವೇಳೆ ಸ್ಥಳಕ್ಕೆ ಅರಣ್ಯ ಇಲಾಖೆಯ ಶಾರ್ಪ್ ಶೂಟರ್ ಡಾ. ವಿನಯ್ ಆಗಮಿಸಿ ಕರಡಿಗೆ ಡಾಟ್ ಮಾಡಲು ಯತ್ನಿಸಿದರು. ಇವರ ಮೊದಲ ಪ್ರಯತ್ನ ವಿಫಲವಾದರೂ, ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದರು.

ಕರಡಿ ಪ್ರಜ್ಞೆ ತಪ್ಪುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ಬಲೆಗೆ ಹಾಕಿ ಸೆರೆ ಹಿಡಿದು ಗೇಜ್​ಗೆ ಹಾಕಿ ತೆಗೆದುಕೊಂಡು ಹೋದರು. ಕರಡಿ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಶಂಕರ ವಲಯದ ಡಿಎಫ್​ಓ ಶಿವಶಂಕರ್ ಅವರು, "ಕರಡಿ ಪ್ರತ್ಯಕ್ಷವಾದ ಮಾಹಿತಿ ಬಂದ ತಕ್ಷಣ ನಮ್ಮ ಸಿಬ್ಬಂದಿ ಕರಡಿ ಸೆರೆಗೆ ಕಾರ್ಯಾಚರಣೆ ಪ್ರಾರಂಭಿಸಿದೆವು. ಕರಡಿ ಸೆರೆಗೆ ಬಲೆ ಗೇಜ್ ಎಲ್ಲವನ್ನು ತರಲಾಗಿತ್ತು. ಮೊದಲು ಕರಡಿ ಇರುವ ಜಾಗವನ್ನು ಗುರುತಿಸಿ, ಕರಡಿಯನ್ನು ಒಂದು ಕಡೆ ಹೋಗುವಂತೆ ಮಾಡಲಾಯಿತು. ಕರಡಿಯನ್ನು ನೋಡಿದಾಗ 6-7 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಡಾ.ವಿನಯ್​ ಅವರು ಕರಡಿಗೆ ಡಾಟ್ ಮಾಡಿದರು. ಕರಡಿ ಪ್ರಜ್ಞೆ ತಪ್ಪಿದ ನಂತರ ಸೆರೆ ಹಿಡಿಯಲಾಗಿದೆ. ಸದ್ಯ ಕರಡಿಯ ಆರೋಗ್ಯವನ್ನು ಪರಿಶೀಲಿಸಿ ಅದನ್ನು ಎಲ್ಲಿ ಬಿಡಬೇಕೆಂದು ತೀರ್ಮಾನ ಮಾಡಲಾಗುವುದು" ಎಂದು ತಿಳಿಸಿದ್ದಾರೆ.

ಇನ್ನು ಸ್ಥಳೀಯರಾದ ಲಿಂಗರಾಜ್​ ಮಾತನಾಡಿ, ಕರಡಿ ಬಂದಿದೆ ಎಂಬ ವಿಷಯ ತಿಳಿದು ನನಗೆ ಆಶ್ಚರ್ಯವಾಯಿತು. ನಂತರ ಕರಡಿ ಎಲ್ಲಿದೆ ಎಂದು ಹುಡುಕಿದೆವು. ಕರಡಿ ಗೋಪಾಲಗೌಡ ಬಡಾವಣೆಯ ನೂರು ಅಡಿ ರಸ್ತೆಯ ಪೆಟ್ರೋಲ್​ ಬಂಕ್ ಹಿಂಬಾಗ ಇತ್ತು. ಅರಣ್ಯ ಇಲಾಖೆಯವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕರಡಿಯನ್ಜು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಅರಣ್ಯ ಇಲಾಖೆಯವರಿಗೆ ಧನ್ಯವಾದ ಎಂದರು.

ಇದನ್ನೂ ಓದಿ:ತೆರೆದ ವಾಹನದಲ್ಲಿ ಆಗಮಿಸಿದ ಪ್ರಧಾನಿ; ಮೋದಿ ಮೇಲೆ ಮೊಬೈಲ್ ಎಸೆತ - ವಿಡಿಯೋ ವೈರಲ್

Last Updated : Feb 28, 2024, 2:29 PM IST

ABOUT THE AUTHOR

...view details