ಕರ್ನಾಟಕ

karnataka

ETV Bharat / state

ಬೆಂಗಳೂರು: ಯಾಮಾರಿಸಿ ನಕಲಿ ಉಂಗುರು ಇಟ್ಟು, 75 ಲಕ್ಷ ಮೌಲ್ಯದ ವಜ್ರದ ಉಂಗುರ ಎಗರಿಸಿದ ಆಸಾಮಿ - Ring stolen

ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಜೋಯಲುಕ್ಕಾಸ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿ, 75 ಲಕ್ಷ ಮೌಲ್ಯದ ವಜ್ರದ ಉಂಗುರ ಎಗರಿಸಿ ಪರಾರಿಯಾಗಿದ್ದಾನೆ.

ವಜ್ರದ ಉಂಗುರ ಕಳ್ಳತನ
ವಜ್ರದ ಉಂಗುರ ಕಳ್ಳತನ

By ETV Bharat Karnataka Team

Published : Feb 23, 2024, 5:56 PM IST

Updated : Feb 23, 2024, 8:15 PM IST

ವಜ್ರದ ಉಂಗುರ ಎಗರಿಸಿದ ಆಸಾಮಿ

ಬೆಂಗಳೂರು:ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿ, ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 75 ಲಕ್ಷ ಮೌಲ್ಯದ ವಜ್ರದ ಉಂಗುರ ಕದ್ದು ಪರಾರಿಯಾಗಿದ್ದಾನೆ. ನಗರದ ಎಂ.ಜಿ.ರಸ್ತೆಯ ಜೋಯಲುಕ್ಕಾಸ್ ಆಭರಣ ಮಳಿಗೆಯಲ್ಲಿ ಘಟನೆ ನಡೆದಿದೆ.

ಫೆಬ್ರವರಿ 18ರಂದು ಸಂಜೆ ಗ್ರಾಹಕನ ಸೋಗಿನಲ್ಲಿ ಬಂದಿದ್ದ ಆರೋಪಿ, ಆಭರಣ ನೋಡುವ ನೆಪದಲ್ಲಿ ಸಿಬ್ಬಂದಿಗೆ ತಿಳಿಯದಂತೆ ನಕಲಿ ಉಂಗುರ ಇರಿಸಿ ಅಸಲಿ ವಜ್ರದ ಉಂಗುರ ಎಗರಿಸಿದ್ದಾನೆ. ಬಳಿಕ ಆಭರಣ ಹಿಡಿಸದವನಂತೆ ನಿಧಾನವಾಗಿ ಎದ್ದು ತೆರಳಿದ್ದಾನೆ. ಮರುದಿನ ಆಭರಣಗಳನ್ನು ಪರಿಶೀಲಿಸುವಾಗ ನಕಲಿ ಉಂಗುರ ಪತ್ತೆಯಾಗಿತ್ತು. ಬಳಿಕ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ ಆರೋಪಿಯ ಕಳ್ಳತನದ ಕೃತ್ಯ ಬಯಲಾಗಿದೆ.

ಸದ್ಯ ಆಭರಣ ಮಳಿಗೆಯ ಪ್ರತಿನಿಧಿ ನೀಡಿರುವ ದೂರಿನನ್ವಯ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯು ಅದೇ ಮಾದರಿಯಲ್ಲಿ‌ ನಗರದ ಇನ್ನೂ ಕೆಲವೆಡೆ ಕೃತ್ಯ ಎಸಗಿರುವುದು ತಿಳಿದು ಬಂದಿದ್ದು, ಆತನಿಗಾಗಿ ಪೊಲೀಸರು ತಲಾಶ್ ಆರಂಭಿಸಿದ್ದಾರೆ.

ಇದನ್ನೂ ಓದಿ :ಆಟೋದಲ್ಲಿ 22 ತೊಲಾ ಚಿನ್ನಾಭರಣ ಮರೆತು ಬಿಟ್ಟುಹೋದ ಮಹಿಳೆ: 24 ಗಂಟೆಗಳಲ್ಲಿ ಪತ್ತೆ ಹಚ್ಚಿದ ಪೊಲೀಸರು

Last Updated : Feb 23, 2024, 8:15 PM IST

ABOUT THE AUTHOR

...view details