ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ: ಹಾವು ಕಡಿತದಿಂದ 7 ವರ್ಷದ ಬಾಲಕಿ ಸಾವು - snake bite - SNAKE BITE

ಹಾವು ಕಡಿತದಿಂದ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

By ETV Bharat Karnataka Team

Published : Apr 27, 2024, 2:53 PM IST

ದೊಡ್ಡಬಳ್ಳಾಪುರ:ಹಾವು ಕಡಿತದಿಂದ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ತಾಲೂಕಿನ ಕೋಳೂರು ಗ್ರಾಮದ ತೋಟವೊಂದರಲ್ಲಿ ಶುಕ್ರವಾರ ಸಂಜೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ರಾಮಾಂಜಿ-ವಿನೋದಮ್ಮ ದಂಪತಿಯ ಪುತ್ರಿ ಅನುಷಾ ಮೃತ ಬಾಲಕಿ. ದಂಪತಿ ತಾಲೂಕಿನ ತೂಬಗೆರೆ ಹೋಬಳಿಯ ಟಿ.ಹೊಸಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು ಕೋಳೂರು ಗ್ರಾಮದಲ್ಲಿರುವ ತೋಟವೊಂದರಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದರು.

ನಿನ್ನೆ ಸಂಜೆ ಸುಮಾರು 6 ಗಂಟೆ‌ ಸಮಯದಲ್ಲಿ ಮಗುವಿಗೆ ಹಾವು ಕಚ್ಚಿದ್ದು, ಅಸ್ವಸ್ಥಗೊಂಡಿರುವ ಬಾಲಕಿಯನ್ನು ಗಮನಿಸಿದ ಪೋಷಕರು, ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಕ್ಕಿನ ಮರಿ ನುಂಗಿ ಪರದಾಡಿದ ನಾಗರಹಾವಿನ ರಕ್ಷಣೆ- ವಿಡಿಯೋ - Snake Swallowed Kitten

ABOUT THE AUTHOR

...view details