ಕರ್ನಾಟಕ

karnataka

ETV Bharat / state

ದುರಸ್ತಿ ಕಾಮಗಾರಿ: ಬೆಂಗಳೂರಿನ ಈ ರೈಲು ನಿಲ್ದಾಣದಲ್ಲಿ ಮೂರು ತಿಂಗಳು ರೈಲು ನಿಲುಗಡೆ ಇಲ್ಲ - no train stop

ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೂರು ತಿಂಗಳ ವರೆಗೆ ಯಾವುದೇ ರೈಲು ನಿಲುಗಡೆ ಇರುವುದಿಲ್ಲ.

ರೈಲು
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Aug 24, 2024, 8:10 PM IST

ಬೆಂಗಳೂರು:ಬೆಂಗಳೂರು ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 1 ಮತ್ತು 2 ರಲ್ಲಿ ಸೆಪ್ಟೆಂಬರ್ 20ರಿಂದ ಡಿಸೆಂಬರ್ 20ರ ವರೆಗೆ ದುರಸ್ತಿ ಕಾರ್ಯ ನಡೆಯುವುದರಿಂದ ಮೂರು ತಿಂಗಳುಗಳ ಕಾಲ ರೈಲು ನಿಲುಗಡೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಪ್ರತಿದಿನ ಸಂಚರಿಸುವ ಮೈಸೂರು - ಎಸ್‌ಎಂವಿಟಿ ಬೆಂಗಳೂರು ರೈಲು (06269) ಸೆ.19ರಿಂದ ಡಿ.19ರ ವರೆಗೆ ನಿಲುಗಡೆಯನ್ನು ರದ್ದುಮಾಡಲಾಗಿದೆ. ವಾರಕ್ಕೊಮ್ಮೆ ಸಂಚರಿಸುವ ಮೈಸೂರು- ರೆಣಿಗುಂಟ (22135) ರೈಲು ನಿಲುಗಡೆಯನ್ನು, ವಾರದ ಆರು ದಿನ ಸಂಚರಿಸುವ ಸಂಚರಿಸುವ ಕೆಎಸ್‌ಆರ್ ಬೆಂಗಳೂರು - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲುಗಡೆ ರದ್ದಾಗಿದೆ.

ಇನ್ನಿತರ ಯಾವ ರೈಲುಗಳು ರದ್ದು:ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ರೈಲು (12677), ಕೆಎಸ್‌ಆರ್ ಬೆಂಗಳೂರು - ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (12608), ಮುರುಡೇಶ್ವರ- ಎಸ್‌ಎಂವಿಟಿ ಬೆಂಗಳೂರು (16586), ಕೆಎಸ್‌ಆರ್ ಬೆಂಗಳೂರು- ಮಾರಿಕುಪ್ಪಂ (06396), ಕೆಎಸ್‌ಆರ್ ಬೆಂಗಳೂರು- ಶ್ರೀಸತ್ಯಸಾಯಿ ಪ್ರಶಾಂತಿನಿಲಯಂ (06515), ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (06515), ಕೆಎಸ್‌ಆರ್ ಬೆಂಗಳೂರು- ಭುವನೇಶ್ವರ (18464) ರೈಲು ಸೆಪ್ಟೆಂಬರ್ 20ರಿಂದ ಡಿಸೆಂಬರ್ 20ರವರೆಗೆ ನಿಲುಗಡೆ ರದ್ದಾಗಿದೆ.

ಕೆಎಸ್‌ಆರ್ ಬೆಂಗಳೂರು - ಜೋಳಪಟ್ಟಿ (06551), ಕೆಎಸ್‌ಆರ್ ಬೆಂಗಳೂರು - ವೈಟ್ ಫೀಲ್ಡ್​ (01765), ಕೆಎಸ್‌ಆರ್ ಬೆಂಗಳೂರು - ಬಂಗಾರಪೇಟೆ (06561/06389), ಕೆಎಸ್‌ಆರ್ ಬೆಂಗಳೂರು - ಕುಪ್ಪಂ (06529) ಬೆಂಗಳೂರು - ಮಾರಿಕುಪ್ಪಂ (01775) ರೈಲು ನಿಲುಗಡೆ ರದ್ದು ಮಾಡಲಾಗಿದೆ. ವಾರಕ್ಕೆ ಎರಡು ಬಾರಿ ಸಂಚರಿಸುವ ಮೈಸೂರು-ಜೈಪುರ (12975) ರೈಲು ಸೆಪ್ಟೆಂಬರ್ 21 ರಿಂದ ಡಿಸೆಂಬರ್ 19ರ ವರೆಗೆ ನಿಲುಗಡೆ ಇರುವುದಿಲ್ಲ.

ಮೈಸೂರು- ಕೂಚುವೇಲಿ (16315), ಮೈಸೂರು- ಕಾಚಿಗುಡ (12786), ಕೆಎಸ್‌ಆರ್ ಬೆಂಗಳೂರು- ಧರ್ಮಪುರಿ, ಕೆಎಸ್‌ಆರ್ ಬೆಂಗಳೂರು- ನವದೆಹಲಿ (12627), ಕೆಎಸ್‌ಆರ್ ಬೆಂಗಳೂರು- ಸಿಎಸ್‌ಎಂಟಿ ಮುಂಬೈ (1302), ಬೆಂಗಳೂರು ದೇಬ್ ನಾಂದೇಡ್ (16593) ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ನಿಲುಗಡೆ ರದ್ದುಗೊಳಿಸಲಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಮುಂದುವರಿದ ಮಳೆ ಆರ್ಭಟ: 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ - karnataka rain alert

ABOUT THE AUTHOR

...view details