ಹುಬ್ಬಳ್ಳಿ:ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಖರೀದಿಗೆ ಬಂದಂತಹ 13 ಜನರನ್ನು ಶಹರ ಠಾಣೆಯ ಪೊಲೀಸರು ನಗರದ ಗುಡ್ ಶೆಟ್ ರೋಡ್ನಲ್ಲಿ ಬಂಧಿಸಿದ್ದಾರೆ. ನವಾಜ್, ಹಜರತ್, ಅಹ್ಮದ್ ಖಾನ್, ಪಾಂಡು, ಶಂಕರನಾಗ್, ಆಕಾಶ, ಅಜುರುದ್ದೀನ್, ವೆಂಕಟೇಶ್, ಮಹಮ್ಮದ್ ಗೌಸ್, ಸರ್ಪರಾಜ್, ನೂರ ಅಹ್ಮದ್, ಆರ್ಯನ್ ಹಾಗೂ ಶಿಖಂದರ್ ಬಂಧಿತ ಆರೋಪಿಗಳು.
ಬಂಧಿತರಿಂದ 1 ಕೆಜಿ 227ಗ್ರಾಂ ಗಾಂಜಾ, ಮೂರು ಮೊಬೈಲ್ ಹಾಗೂ 6 ಸಾವಿರ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೀರಜ್ನಿಂದ ಗಾಂಜಾ ತಂದಿದ್ದ ನವಾಜ್ ಎಂಬಾತ ದಾವಣಗೆರೆಯಿಂದ ಬಂದ ವ್ಯಕ್ತಿಗೆ ಮಾರಾಟಕ್ಕೆ ಮುಂದಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.