Rey Mysterio Sr dead: ಭಾರತದಲ್ಲಿ ಬಾಲಕರು ಹೆಚ್ಚಾಗಿ ಇಷ್ಟ ಪಡುವ ಆಟವೆಂದರೆ ಅದು ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE). ಜಾನ್ ಸೀನಾ, ಬಿಗ್ ಶೋ, ಗ್ರೇಟ್ ಖಲಿ, ರಾಕ್ ಸೇರಿದಂತೆ ಹಲವಾರು ಕುಸ್ತಿಪಟುಗಳು ಭಾರತದಲ್ಲಿ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಅದರಲ್ಲೂ ರೇ ಮಿಸ್ಟೀರಿಯೊ ಅಂದರೇ ಬಾಲಕರಿಗೆ ಎಲ್ಲಿಲ್ಲದ ಪ್ರೀತಿ. ವಿವಿಧ ಭಂಗಿಯ ಜಂಪ್ಗಳಿಂದಲೇ ಖ್ಯಾತಿ ಪಡೆದುಕೊಂಡಿರುವ ರೇ ಮಿಸ್ಟರಿಯೋ, WWEನಲ್ಲಿ ಅತೀ ಹೆಚ್ಚು ಮೆಚ್ಚುಗೆ ಪಡೆದ ಅಟಗಾರರಲ್ಲಿ ಒಬ್ಬರಾಗಿದ್ದಾರೆ. ಇಂತಹ ದಿಗ್ಗಜ ಕುಸ್ತಿಪಟುವಿನ ಮನೆಯಲ್ಲೀಗ ಶೋಕ ಆವರಿಸಿದೆ.
ಹೌದು, ಮೆಕ್ಸಿಕನ್ ಸ್ಟಾರ್ ಕುಸ್ತಿಪಟು ರೇ ಮಿಸ್ಟೀರಿಯೊ ಸೀನಿಯರ್ (66)ನೇ ವಯಸ್ಸಿನಲ್ಲಿ ಇಹಲೋಕ ತಜಿಸಿದ್ದಾರೆ. ಇವರು WWE ಸೂಪರ್‌ಸ್ಟಾರ್ ಮತ್ತು ಹಾಲ್ ಆಫ್ ಫೇಮ್ ರೇ ಮಿಸ್ಟೀರಿಯೊ ಜೂನಿಯರ್ ಅವರ ಚಿಕ್ಕಪ್ಪ ಆಗಿದ್ದರು. ಈ ದುಃಖದ ಸುದ್ದಿಯನ್ನು ಅವರ ಕುಟುಂಬಸ್ಥರು ಖಚಿತಪಡಿಸಿದ್ದಾರೆ.
ರೇ ಮಿಸ್ಟೀರಿಯೊ ಜೂನಿಯರ್ ಭಾವನಾತ್ಮಕ ಪೋಸ್ಟ್:ಕಳೆದು ತಿಂಗಳು ನವೆಂಬರ್ 17ರಂದು ರೇ ಮಿಸ್ಟೀರಿಯೊ ಜೂನಿಯರ್ ಅವರ ತಂದೆ ಮತ್ತು ಡೊಮಿನಿಕ್ ಮಿಸ್ಟೀರಿಯೊ ಅವರ ಅಜ್ಜ ರಾಬರ್ಟೊ ಗುಟೈರೆಜ್ ನಿಧನ ಹೊಂದಿದ್ದರು. ಇದಾದ ಕೆಲವೇ ವಾರಗಳಲ್ಲಿ ರೇ ಮಿಸ್ಟೀರಿಯೋ ಸಿನಿಯರ್ ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ ರೇ ಮಿಸ್ಟೀರಿಯೊ ಜೂನಿಯರ್ ಬಾವನಾತ್ಮವಾಗಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.